Advertisement

ಜನಸ್ನೇಹಿ ಪೊಲೀಸ್‌ ಆಗಿ ಕಾರ್ಯನಿರ್ವಹಿಸಿ

03:34 PM Nov 04, 2020 | Suhan S |

ಕೊಳ್ಳೇಗಾಲ: ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಪೊಲೀಸ್‌ ಆಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ತಿಳಿಸಿದರು.

Advertisement

ಪಟ್ಟಣದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು,ಯಾವುದೇ ಪ್ರಕರಣಗಳು ಜರುಗಿದಪಕ್ಷದಲ್ಲಿ ಮೊದಲಿಗೆ ಠಾಣೆಗೆ ದೂರು ಸಲ್ಲಿಸಬೇಕು. ಠಾಣಾ ಅಧಿಕಾರಿಗಳು ಸ್ಪಂದಿಸದಿದ್ದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು. ಈ ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಹೆಲ್ಮೆಟ್‌ ಇಲ್ಲದೇ ವಾಹನ ಚಾಲನೆ ಮಾಡುವುದು ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜ ನಿಕರಿಂದ ಸಂಗ್ರಹಿಸಿರುವ ಹಣವನ್ನು ಸರ್ಕಾರಕ್ಕೆ ಪ್ರತಿದಿನ ಸಂದಾಯ ಮಾಡಲಾಗುವುದು. ಹಣ ಎಲ್ಲಿಯೂ ಸಹ ದುರ್ಬಳಕೆ ಆಗುವುದಿಲ್ಲ ಎಂದು ಹೇಳಿದರು.

ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ, ಮರಳು ದಂಧೆ ನಡೆಯುತ್ತಿದೆ ಎಂಬ ದೂರುಗಳು ಬಂದಿದ್ದು, ಅಕ್ರಮ ಮದ್ಯ ಮಾರಾಟ ಬಗ್ಗೆ ಸಾಕಷ್ಟು ಪ್ರಕರಣಗಳು ಸಂಬಂಧಿಸಿದ ಠಾಣೆಗಳಲ್ಲಿ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಬಾರ್‌ ಮಾಲೀಕರ ಮೇಲೂ ದೂರು ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಜನಸಂಪರ್ಕ ಸಭೆಯನ್ನು ಗ್ರಾಮೀಣ ಪ್ರದೇಶದಲ್ಲಿ ನಡೆದಬೇಕೆಂದು ಮನವಿ ಮಾಡಿದ್ದು, ಕೂಡಲೇ ಗ್ರಾಮ ಮಟ್ಟದಲ್ಲೂ ಸಭೆ ನಡೆಸಲು ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಾರ್ವಜನಿ ಕರು ಪೊಲೀಸ್‌ ಇಲಾಖೆಗೆ ಸಹಕರಿಸುವ ಮೂಲಕ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಸಭೆಯಲ್ಲಿ ಡಿವೈಎಸ್ಪಿ ನಾಗರಾಜು, ವೃತ್ತ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಪಟ್ಟಣ ಠಾಣೆ ಎಸ್‌ಐ ತಾಜುದ್ದೀನ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ವಿ.ಸಿ.ಅಶೋಕ್‌, ಅಪರಾಧ ವಿಭಾಗದ ಎಸ್‌ಐ ವೀರಭದ್ರಪ್ಪ ಸಿಬ್ಬಂದಿ ಉಪಸ್ಥಿತರಿದ್ದರು.

10 ಕೆ.ಜಿ.ಅಕ್ಕಿ ವಿತರಿಸಲು ಒತ್ತಾಯಿಸಿ ಧರಣಿ :

ಕೊಳ್ಳೇಗಾಲ: ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 10 ಕೆ.ಜಿ. ಅಕ್ಕಿ ಮತ್ತು ದವಸಧಾನ್ಯಗಳನ್ನು ವರ್ಷಪೂರ್ತಿ ವಿತರಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟ ನೆ ಪ್ರತಿಭಟನೆ ನಡೆಸಿತು.

ತಾಲೂಕು ಕಚೇರಿ ಬಳಿ ಜಮಾಯಿಸಿದ ಸಂಘಟನೆಯ ಮಹಿಳೆಯರು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಈ ವೇಳೆ ಸಂಘಟನೆ ಸಂಚಾಲಕಿ ಪುಟ್ಟಗೌರಮ್ಮ ಮಾತನಾಡಿ, ಕೊರೊನಾದಿಂದ ಕಾರ್ಮಿಕರು ಮತ್ತು ಗ್ರಾಮೀಣ  ಮಹಿಳೆಯರಿಗೆ ಉದ್ಯೋಗವಿಲ್ಲದೆ

ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೋವಿಡ್  ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಡಿತರ ಅಕ್ಕಿಯನ್ನು ತಲಾ 10 ಕೆ.ಜಿ. ನೀಡುತ್ತಿತ್ತು. ಈಗ 5 ಕೆ.ಜಿ. ಇಳಿಸಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ತಲಾ 7 ಕೆ.ಜಿ. ಅಕ್ಕಿ ಇನ್ನಿತರ ಆಹಾರ ಪದಾರ್ಥ ನೀಡಬೇಕು.

ನರೇಗಾದಡಿ ಹೆಚ್ಚು ಉದ್ಯೋಗ ಕಲ್ಪಿಸಬೇಕು ಎಂದರು. ಬಳಿಕ ತಹಶೀಲ್ದಾರ್‌ ಕುನಾಲ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಮಹಿಳೆಯರಾದ ಮಹದೇವಮ್ಮ, ರಾಣಿ, ಶಿವಮ್ಮ, ಜಯಮ್ಮ, ರೇಣುಕ, ಪುಟ್ಟಕೆಂಪಮ್ಮ, ಜಿಲ್ಲಾ ಡಿಎಸ್‌ಎಸ್‌ ಸಂಚಾಲಕ ನಿಂಗರಾಜು ಮತ್ತಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next