ಗುಂಡ್ಲುಪೇಟೆ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ವಿಳಂಬವಾಗುತ್ತಿರುವ ಕಾರಣ ಜನರು ಸಭೆಗೆ ಪದೇ ಪದೆ ಬರುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಎದುರಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಸಿ.ಎಸ್ .ನಿರಂಜನಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು, ಎರಡು ವರ್ಷ ಕಳೆದರು ಸಹ ತೋಟಗಾರಿಕೆ ಇಲಾಖೆಯಿಂದಸಲಕರಣೆಗಳ ಬಿಲ್ ಪಾವತಿಯಾಗಿಲ್ಲ. ಹಾಕಿದ ಗಿಡವು ಈಗ ಆಳೆತ್ತರ ಬೆಳೆದಿದ್ದರೂ ಬಿಲ್ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ದೂರಿದರು.
ಮಲ್ಲಯ್ಯನಪುರ ಕನಕ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಎರಡು ವರ್ಷ ಕಳೆದರು ಇನ್ನು ಹಣ ಬಿಡುಗಡೆಯಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಹಸೀಲ್ದಾರ್ ಸಿ.ಜಿ.ರವಿಶಂಕರ್, ಪಿಡ್ಲ್ಯೂಡಿ ಇಲಾಖೆ ಎಇಇ ರವಿಕುಮಾರ್, ಬಿಇಓ ಎಸ್.ಸಿ.ಶಿವಮೂರ್ತಿ, ಅಕ್ಷರ ದಾಸೋಹದ ಮಂಜಣ್ಣ, ಸರ್ವೇ ಇಲಾಖೆ ರಮೇಶನಾಯಕ್, ಚೆಸ್ಕಾಂ ಸಿದ್ದಲಿಂಗಪ್ಪ, ಸಿಡಿಪಿಒ ಚಲುವರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್,ಆರ್ ಐ ರವಿಕುಮಾರ್, ರಾಜಕುಮಾರ್, ಶ್ರೀನಿವಾಸ್ ಇತರರಿದ್ದರು.