ಮಂಗಳೂರು : ಮಂಗಳೂರು ಪಾಲಿಕೆ ವ್ಯಾಪ್ತಿಯ ನೀರು ಸರಬರಾಜು ವ್ಯವಸ್ಥೆಯ ತುಂಬೆ-ಬೆಂದೂರ್ವೆಲ್ ಪಣಂಬೂರು 1000 ಎಂಎಂ ವ್ಯಾಸದ ಕೊಳವೆ ಕಣ್ಣೂರು ಶೆಲ್ ಪೆಟ್ರೋಲ್ ಪಂಪ್ ಬಳಿ ಬಿರುಕು ಬಿಟ್ಟಿದ್ದು ಮತ್ತು ಕೊಟ್ಟಾರ ಚೌಕಿ ಕೆಯುಐಡಿಎಫ್ ಸಿ ವತಿಯಿಂದ 900 ಎಂಎಂ ವ್ಯಾಸದ ಕೊಳವೆ ಮರುಜೋಡಣೆ ಕಾಮಗಾರಿ ಇರುವ ಕಾರಣ ಜ.23 ರಂದು ಬೆಳಗ್ಗೆ 6 ಗಂಟೆಯಿಂದ 24 ರಂದು ಬೆಳಗ್ಗೆ 6 ಗಂಟೆಯ ಅವಧಿಯಲ್ಲಿ ನಗರದ ಹಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಬೆಂದೂರ್ವೆಲ್ ಲೋ ಲೆವೆಲ್ ಪ್ರದೇಶಗಳಾದ ಪಿವಿಎಸ್, ಲೇಡಿಹಿಲ್, ಬಂದರು, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬಲ್ ಕೊಡಿಯಾಲಬೈಲು, ಕದ್ರಿ, ನಾಗೂರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ, ಕಾನ, ಬಾಳಾ, ಕುಳಾಯಿ, ಮುಕ್ಕ, ಪಣಂಬೂರು ಮುಂತಾದ ಪ್ರದೇಶಗಳಲ್ಲಿ ಸಂಪೂರ್ಣವಾಗಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.