ಜಮ್ಮು: ಇನ್ನು ಮುಂದೆ ಜಮ್ಮುವಿನ ಅತಿದೊಡ್ಡ ದಾಸ್ತಾನು ಕೇಂದ್ರದಲ್ಲಿ ಸರಕುಗಳ ದರಪಟ್ಟಿ ಸಂಸ್ಕೃತ ಭಾಷೆಯಲ್ಲೇ ಇರಲಿದೆ!
Advertisement
ಸಂಸ್ಕೃತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ವ್ಯಾಪಾರಿಗಳ ಸಂಘವೊಂದು ಇಂಥ ನಿರ್ಧಾರ ಕೈಗೊಂಡಿದೆ.
ಅಷ್ಟೇ ಅಲ್ಲ, ಕೇಂದ್ರಾಡಳಿತ ಪ್ರದೇಶದ ಅತಿದೊಡ್ಡ ಮತ್ತು ಅತಿ ಪ್ರಾಚೀನ “ಧಾನ್ಯ ಮಂಡಿ’ಯಲ್ಲಿ ಮಂಗಳವಾರ “ಸಂಸ್ಕೃತ ಮಾರುಕಟ್ಟೆ’ಯನ್ನೂ ಸಂಘವು ಲೋಕಾರ್ಪಣೆ ಮಾಡಿದೆ.
ನ.30ರಂದು ವ್ಯಾಪಾರಿಗಳು ಮತ್ತು ಅವರ ಸಿಬ್ಬಂದಿಗೆ ಸಂಸ್ಕೃತ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಸಂಸ್ಕೃತ ವಿವಿ ನಿರ್ದೇಶಕ ಪ್ರೊ. ಮದನ್ ಮೋಹನ್ ಝಾ ಹೇಳಿದ್ದಾರೆ.