Advertisement

ನಿಲ್ಲದ ಉಗ್ರರ “ರಕ್ತದಾಹ’ : ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಗೂ ಮುನ್ನ ಮೂರು ಕುಕೃತ್ಯ

09:37 PM Jun 02, 2022 | Team Udayavani |

ನವದೆಹಲಿ/ಶ್ರೀನಗರ: ಮಾಸಾಂತ್ಯದಿಂದ ಅಮರನಾಥಯಾತ್ರೆ ಶುರುವಾಗಲಿರುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಆಟಾಟೋಪ ಮುಂದುವರಿದಿದೆ. ಕುಲ್ಗಾಂವ್‌ನಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್‌ ಮ್ಯಾನೇಜರ್‌ ವಿಜಯ ಕುಮಾರ್‌ ಅವರನ್ನು ಹತ್ಯೆ ಮಾಡುವ ಘಟನೆ ಮುನ್ನವೇ ಹಲವು ಕಿಡಿಗೇಡಿತನದ ಕೃತ್ಯಗಳನ್ನು ನಡೆಸಿದ್ದಾರೆ.

Advertisement

ಶೋಪಿಯಾನ್‌ ಜಿಲ್ಲೆಯಲ್ಲಿ ವಾಹನದಲ್ಲಿ ಯೋಧರು ಭದ್ರತಾ ಕಾರ್ಯಕ್ಕಾಗಿ ತೆರಳುತ್ತಿದ್ದ ವೇಳೆ, ಉಗ್ರರು ಗ್ರೆನೇಡ್‌ ಎಸೆದಿದ್ದಾರೆ. ಈ ಘಟನೆಯಲ್ಲಿ ಮೂವರು ಯೋಧರಿಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಪ್ರಗತಿಯಲ್ಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಜಿಲ್ಲೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಫಾರೂಖ್‌ ಅಹ್ಮದ್‌ ಶೇಖ್‌ ಎಂಬುವರ ಮೇಲೆ ಉಗ್ರರು ಗ್ರೆನೇಡ್‌ ಎಸೆದಿದ್ದಾರೆ. ಇದರಿಂದಾಗಿ ಅವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯಕ್ತಿ ಬಂಧನ:
ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಲಷ್ಕರ್‌-ಎ-ತೊಯ್ಬಾ ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪುಣೆಯಲ್ಲಿ ವ್ಯಕ್ತಿಯನ್ನು ಬಂಧಿಸಿದೆ. ಆತ ಜಮ್ಮುವಿನ ಕಿಶ್ವಾ$¤ರ್‌ಗೆ ಸೇರಿದವನಾಗಿದ್ದಾನೆ. ಆತನನ್ನು ಜುನೈದ್‌ ಮೊಹಮ್ಮದ್‌ (28) ಎಂದು ಗುರುತಿಸಲಾಗಿದೆ ಎಂದು ಎಟಿಎಸ್‌ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್‌ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕೆಲ ದಿನಗಳ ಹಿಂದೆ ತನಿಖೆ ನಡೆಸಿತ್ತು. ವಿವಿಧ ರಾಜ್ಯಗಳಿಂದ ಆತನಿಗೆ ಉಗ್ರ ಸಂಘಟನೆಗೆ ನೇಮಕ ಮಾಡುವ ಹೊಣೆ ನೀಡಲಾಗಿತ್ತು.

ಪಂಡಿತರು ಕಿಕ್ಕಿರಿದು ತುಂಬಿಲ್ಲ: ಸ್ಪಷ್ಟನೆ
ಕುಲ್ಗಾಂವ್‌ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ, ಸಾಂಬಾ ಜಿಲ್ಲೆಯಲ್ಲಿ ಶಿಕ್ಷಕಿಯನ್ನು ಉಗ್ರರು ಕೊಂದ ಘಟನೆ ಬಳಿಕ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕಾಶ್ಮೀರ ಪಂಡಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಲ್ಲ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸುಳ್ಳು ಎಂದು ವಿಮಾನ ನಿಲ್ದಾಣ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಗುರುವಾರ ಎಂದಿನಂತೆಯೇ ಪ್ರಯಾಣಿಕರು ನಿರಾತಂಕವಾಗಿ ಪ್ರಯಾಣ ನಡೆಸಿದ್ದಾರೆ. ಪ್ರತಿ ದಿನ 16 ಸಾವಿರದಿಂದ 18 ಸಾವಿರ ಮಂದಿ ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದಿದೆ. ಜತೆಗೆ ಉಗ್ರರ ದುಷ್ಕೃತ್ಯ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next