Advertisement

Jammu: ಜೂ.8ರಂದು ಜಮ್ಮು ಬಾಲಾಜಿ ದೇಗುಲ ಉದ್ಘಾಟನೆ

08:55 PM May 21, 2023 | Team Udayavani |

ಜಮ್ಮು: ತಿರುಮಲ ತಿರುಪತಿ ದೇವಸ್ಥಾನಗಳ(ಟಿಟಿಡಿ) ಟ್ರಸ್ಟ್‌ ವತಿಯಿಂದ ತಿರುಮಲದ ಮಾದರಿಯಲ್ಲೇ ಜಮ್ಮುವಿನ ಮಜೀನ್‌ ಪ್ರದೇಶದ ಶಿವಾಲಿಕ್‌ ಅರಣ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಗುಲ ಅಂತಿಮ ಹಂತ ತಲುಪಿದೆ. ಜೂ.8ರಂದು ಇದು ಉದ್ಘಾಟನೆಯಾಗಲಿದ್ದು, ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

Advertisement

62 ಎಕರೆ ಪ್ರದೇಶದಲ್ಲಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ತಿರುಪತಿ ಬಾಲಾಜಿ ದೇಗುಲ ನಿರ್ಮಿಸಲಾಗಿದೆ. ಇದು ಜಮ್ಮುವಿನಲ್ಲೇ ಅತ್ಯಂತ ದೊಡ್ಡ ದೇಗುಲವಾಗಲಿದೆ. ಅಲ್ಲದೇ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರ್ಮಿಕ ಮತ್ತು ತೀರ್ಥಯಾತ್ರೆ ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ.

ಈಗಾಗಲೇ ಟಿಟಿಡಿ ವತಿಯಿಂದ ಹೈದರಾಬಾದ್‌, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ತಿರುಪತಿ ಬಾಲಾಜಿ ದೇಗುಲಗಳನ್ನು ನಿರ್ಮಿಸಲಾಗಿದೆ. ಟಿಟಿಡಿಯಿಂದ ನಿರ್ಮಿಸಲಾದ ಆರನೇ ದೇಗುಲ(ಜಮ್ಮು) ಇದು.

“ದೇಗುಲ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಜೂ.3ರಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ. ಜೂ.8ರಿಂದ ದೇಗುಲ ಪ್ರವೇಶಕ್ಕೆ ಮುಕ್ತವಾಗಲಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರಲಿದೆ. ತಿರುಮಲದಲ್ಲಿ ಹೇಗೆ ಧಾರ್ಮಿಕ ವ್ಯವಸ್ಥೆ ಜಾರಿಯಲ್ಲಿದೆಯೋ ಅದೇ ರೀತಿ ಇಲ್ಲೂ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತದೆ,’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ತಿಳಿಸಿದ್ದಾರೆ.

“ಈ ದೇಗುಲವನ್ನು ಜಮ್ಮು ಮತ್ತು ಕಾತ್ರಾ ನಡುವಿನ ಪವಿತ್ರ ಸ್ಥಳದಲ್ಲಿ ನಿರ್ಮಿಸಲಾಗಿದೆ. ಮಾತಾ ವೈಷ್ಣೋದೇವಿ ದೇಗುಲದ ಬಳಿ ಇದು ನಿರ್ಮಾಣಗೊಂಡಿದೆ. 2021ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ತಿರುಪತಿಗೆ ಹೋಗಲು ಸಾಧ್ಯವಾಗದವರೂ ಇಲ್ಲಿ ಬಾಲಾಜಿ ದರ್ಶನವನ್ನು ಪಡೆಯಬಹುದು,’ ಎಂದು ಹೇಳಿದ್ದಾರೆ.

Advertisement

62 ಎಕರೆ-  ಪ್ರದೇಶದಲ್ಲಿ ದೇಗುಲ ನಿರ್ಮಾಣ
30 ಕೋಟಿ ರೂ.- ದೇಗುಲ ನಿರ್ಮಾಣಕ್ಕೆ ಆದ ವೆಚ್ಚ
2021 – ದೇಗುಲ ನಿರ್ಮಾಣ ಕಾರ್ಯ ಆರಂಭವಾಗಿದ್ದು
ಸ್ಥಳ- ಜಮ್ಮುವಿನ ಶಿವಾಲಿಕ್‌ ಕಾಡು
ಮಾರ್ಗ – ಜಮ್ಮು ಮತ್ತು ಕಾತ್ರಾ ಮಾರ್ಗಮಧ್ಯೆ

Advertisement

Udayavani is now on Telegram. Click here to join our channel and stay updated with the latest news.

Next