Advertisement

ಜಾಮಿಯಾ ವಿವಿಯಲ್ಲಿ ಮತ್ತೆ ಗುಂಡಿನ ಸದ್ದು:ಸ್ಕೂಟಿಯಲ್ಲಿ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು

10:00 AM Feb 04, 2020 | keerthan |

ಹೊಸದಿಲ್ಲಿ: ಇಲ್ಲಿನ ಜಾಮಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದಲ್ಲಿ ಮತ್ತೊಮ್ಮೆ ಗುಂಡಿನ ಶಬ್ಧ ಕೇಳಿದೆ. ಭಾನುವಾರ ತಡರಾತ್ರಿ ಜಾಮಿಯಾ ವಿವಿಯ ಗೇಟ್ ನಂ 5ರಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

Advertisement

ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಇಬ್ಬರು ಬಂದೂಕುಧಾರಿ ದುಷ್ಕರ್ಮಿಗಳು ಸ್ಕೂಟಿಯಲ್ಲಿ ಬಂದಿದ್ದರು. ಅವರಿಬ್ಬರು ಕೆಂಪು ಬಣ್ಣದ ಸ್ಕೂಟಿಯಲ್ಲಿ ಆಗಮಿಸಿದ್ದು, ಸ್ಕೂಟಿ 1532 ಎಂದು ಅಂತ್ಯವಾಗುವ ನಂಬರ್ ಪ್ಲೇಟ್ ಹೊಂದಿತ್ತು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ವರದಿಯಾಗಿದೆ.

ಕೆಲ ದಿನಗಳ ಹಿಂದೆ ಇದೇ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದ. ಓರ್ವ ವಿದ್ಯಾರ್ಥಿಗೆ ಘಟನೆಯಲ್ಲಿ ಗಾಯವಾಗಿತ್ತು.

ಗೇಟ್ ನಂ 5ರ ಬಳಿ ನಡೆದ ಈ ಘಟನೆಯ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರು ಮುಕ್ಕಾಂ ಹೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next