Advertisement

ಕ್ರೀಸ್ ಕಚ್ಚಿ ನಿಂತ ಆ್ಯಂಡರ್ಸನ್..: ಕೊನೆಗೂ ಸೋಲು ತಪ್ಪಿಸಿಕೊಂಡ ರೂಟ್ ಪಡೆ

03:39 PM Jan 09, 2022 | Team Udayavani |

ಸಿಡ್ನಿ: ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಡ್ನಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸೋಲು ತಪ್ಪಿಸುವ ಇಂಗ್ಲೆಂಡ್ ನ ಪ್ರಯತ್ನ ಮತ್ತು ಗೆಲುವು ಕಾಣುವ ಆಸ್ಟ್ರೇಲಿಯಾದ ಪ್ರಯತ್ನದಲ್ಲಿ ಕೊನೆಗೆ ಇಂಗ್ಲೆಂಡ್ ನ ಪ್ರಯತ್ನಕ್ಕೆ ಗೆಲುವಾಗಿದೆ.

Advertisement

ಇಂಗ್ಲೆಂಡ್ 270 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಗೆಲುವು ಬಹುದೂರ. ಆದರೆ ಸೋಲು ತಪ್ಪಿಸಿ ಪಂದ್ಯ ಡ್ರಾ ಮಾಡಲು ಒಂದು ಓವರ್ ಆಡಬೇಕಿತ್ತು, ಇರುವುದು ಒಂದೇ ವಿಕೆಟ್. ಕ್ರೀಸ್ ನಲ್ಲಿದ್ದಿದು ಆ್ಯಂಡರ್ಸನ್  ಮತ್ತು ಬ್ರಾಡ್. ಸ್ಟೀವ್ ಸ್ಮಿತ್ ಎಸೆದ ಕೊನೆಯ ಓವರ್ ನ್ನು ಆ್ಯಂಡರ್ಸನ್ ಎದುರಿಸಿದರು. ಆ್ಯಂಡರ್ಸನ್ ಸುತ್ತ ಎಂಟು ಮಂದಿ ಫೀಲ್ಡರ್ ಗಳು ಚಕ್ರವ್ಯೂಹವನ್ನೇ ರಚಿಸಿದ್ದರು. ಆದರೆ ಎದೆಗುಂದದ ಆ್ಯಂಡರ್ಸನ್ ಪೂರ್ತಿ ಓವರ್ ನ್ನು ರಕ್ಷಣಾತ್ಮಕವಾಗಿ ಆಡಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು.

ಸತತ ನಾಲ್ಕನೇ ಜಯ ಸಾಧಿಸುವ ಆಸೀಸ್ ಕನಸು ನನಸಾಗಲಿಲ್ಲ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಆಸ್ಟ್ರೆಲಿಯಾ ತಂಡ ಗೆದ್ದುಕೊಂಡಿದೆ.

ಪಂದ್ಯ ಜಯಿಸಲು ಇಂಗ್ಲೆಂಡ್ 388 ರನ್ ಗಳಿಸಬೇಕಿತ್ತು. ಆದರೆ ಜ್ಯಾಕ್ ಕ್ರಾವ್ಲಿ ಹೊರತುಪಡಿಸಿ ಟಾಪ್ ಆರ್ಡರ್ ಬ್ಯಾಟರ್ ಗಳ ಸಹಾಯ ಇಂಗ್ಲೆಂಡ್ ಗೆ ಸಿಗಲಿಲ್ಲ. ಕ್ರಾವ್ಲಿ 77 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ 60 ರನ್ ಮತ್ತು ಮೊದಲ ಇನ್ನಿಂಗ್ಸ್ ನ ಶತಕವೀರ ಜಾನಿ ಬೆರಿಸ್ಟೋ  41 ರನ್ ಗಳಿಸಿದರು.

ಇದನ್ನೂ ಓದಿ:ನೋ ಬಾಲ್ ಅಲ್ಲ, ಆದರೂ ಒಂದೇ ಎಸೆತಕ್ಕೆ 7 ರನ್..: ವಿಡಿಯೋ ನೋಡಿ

Advertisement

ಆಸೀಸ್ ಪರ ಬೊಲಾಂಡ್ ಮೂರು ವಿಕೆಟ್ ಕಿತ್ತರೆ, ಕಮಿನ್ಸ್ ಮತ್ತು ಲಯಾನ್ ತಲಾ ಎರಡು ವಿಕೆಟ್ ಕಿತ್ತರು. ತಲಾ ಒಂದು ವಿಕೆಟ್ ಗ್ರೀನ್ ಮತ್ತು ಸ್ಮಿತ್ ಪಾಲಾಯಿತು.

ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಉಸ್ಮಾನ್ ಖವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆ್ಯಶಸ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ  ಜನವರಿ 14ರಿಂದ ಹೋಬಾರ್ಟ್ ನಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next