Advertisement

ಅತ್ಯಾಕರ್ಷಕ ಜಂಬೂ ಸವಾರಿ: ನಾಡದೇವತೆಗೆ ಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

09:12 PM Oct 05, 2022 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಬುಧವಾರ ಕೋಟ್ಯಂತರ ಜನರ ಕಣ್ಣಿಗೆ ಸಂಭ್ರಮವಾಗಿ ಕಂಡು ಬಂದಿತು. ಸಾಂಸ್ಕೃತಿಕ ನಗರಿಯಲ್ಲಿ ವಿಜಯ ದಶಮಿಯಂದು ನಡೆದ ವೈಭವಯುತ ಸಂಭ್ರಮದಲ್ಲಿ ಅಭಿಮನ್ಯು ಹೊತ್ತಿದ್ದ ಅಂಬಾರಿಯಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಗಣ್ಯರು ಪುಷ್ಪಾರ್ಚನೆ ಗೈದರು.

Advertisement

ಸಂಜೆ 5.18ರ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್, ಸಚಿವರಾದ ಸುನಿಲ್ ಕುಮಾರ್, ಎಸ್ . ಟಿ. ಸೋಮಶೇಖರ್ ಸೇರಿ 7 ಮಂದಿ ಗಣ್ಯರು ಚಿನ್ನದಂಬಾರಿಗೆ ಪುಷ್ಪಾರ್ಚನೆ ಮಾಡಿದರು.

ಇದನ್ನೂ ಓದಿ : ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ

ಈ ಬಾರಿ ಜಂಬೂಸವಾರಿ ತಡವಾಗಿ ಆರಂಭವಾದರಿಂದ ಬನ್ನಿಮಂಟಪ ತಲುಪುವುದು ತಡವಾಗಲಿದೆ.

2019ರ ಬಳಿಕ ಈ ಬಾರಿ ಅರಮನೆಯಿಂದ ಬನ್ನಿ ಮಂಟಪದ ಮೈದಾನದವರೆಗೆ ಮೆರವಣಿಗೆ ಸಾಗುತ್ತಿದೆ. ಅಭಿಮನ್ಯು ಜತೆಗೆ 13 ಆನೆಗಳು, ಅಶ್ವರೋಹಿಪಡೆಗಳು, ಆನೆಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ.

Advertisement

ಮೆರವಣಿಗೆಯಲ್ಲಿ ರಾಜ್ಯ 31 ಜಿಪಂ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿ 100ಕ್ಕೂ ಜಾನಪದ ತಂಡಗಳು ಭಾಗವಹಿಸಿ ಕಣ್ಮನ ಸೆಳೆದವು.

ಲಕ್ಷಾಂತರ ಜನರು ಮೈಸೂರಿನ ಸಂಭ್ರಮದಲ್ಲಿ ಭಾಗಿಯಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next