Advertisement

ಪಾಳು ಬಾವಿಯಿದೆ, ಬಿದ್ದೀರಾ ಜೋಕೆ!

01:42 PM Nov 21, 2019 | Naveen |

ಜಮಖಂಡಿ: ನಗರದ ಸರಕಾರಿ ನೂತನ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಬಳಿ ಪಾಳು ಬಿದ್ದಿರುವ ಪುರಾತನ ಸಿಹಿನೀರಿನ ಬಾವಿಯಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ರಾಜ-ಮಹಾರಾಜರು ಅಂದಿನ ಕಾಲದಲ್ಲಿ ನಾಗರಿಕರಿಗೆ ಕುಡಿಯುವ ನೀರಿಗಾಗಿ ಅನುಕೂಲವಾಗಲೆಂದು ನಿರ್ಮಿಸಿದ ಪುರಾತನ ಸಿಹಿ ನೀರಿನ ಬಾವಿ ಸದ್ಯ ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದಿದೆ.

Advertisement

ಬಾವಿ ಪಕ್ಕದಲ್ಲೇ 2008-2009ನೇ ಸಾಲಿನಲ್ಲಿ ನೂತನ ವಿದ್ಯಾಲಯ ನಿರ್ಮಿಸಿದ್ದು, ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಮೂಡಿದೆ. ಕಳೆದೊಂದು ವರ್ಷ ಹಿಂದೆ ಬೇಸಿಗೆ ಸಮಯದಲ್ಲಿ ಬಾವಿ ಗಾಳ ತೆಗೆಯಲೆಂದು ನಗರಸಭೆ ಬಾವಿ ಸುತ್ತ ಬಿಗಿದ ತಂತಿ ಬೇಲಿಯನ್ನು ತೆಗೆದು ಹೂಳು ತೆಗೆಯುವ ಕಾರ್ಯ ಕೈಗೊಂಡಿತ್ತು. ಬಳಿಕ ಬಾವಿಗೆ ಮತ್ತೇ ತಂತಿ ಬೇಲಿ ಜೋಡಿಸದೆ ಹಾಗೇ ಬಿಟ್ಟಿದ್ದಾರೆ. ಕಳೆದ ವಾರ ಬಾವಿ ಸುತ್ತ ಆಹಾರಕ್ಕಾಗಿ ಅಲೆದಾಡುತ್ತಿದ್ದ ನಾಲ್ಕು ಮೇಕೆ ಮರಿಗಳು ಬಾವಿಯಲ್ಲಿ ಬಿದ್ದು, ಪ್ರಾಣಾಪಾಯದಿಂದ ಪಾರಾಗಿವೆ. ಯುವಕರ ಸಹಾಯದಿಂದ ಮೇಕೆಗಳನ್ನು ಹೊರ ತೆಗೆಯಲಾಗಿದೆ.

ಪ್ರತಿನಿತ್ಯ ಶಾಲೆಗೆ ಬರುವ ಮಕ್ಕಳು ಬಾವಿ ಸುತ್ತುವರೆದು ಬರಬೇಕು. ಇದರಿಂದ ಅಪಾಯಕ್ಕೆ ಎಡೆಮಾಡಿಕೊಡುವ ಸನ್ನಿವೇಶಗಳು ನಿರ್ಮಾಣವಾಗುವ ಆತಂಕವಿದೆ. ಈಗಾಗಲೇ ಶಾಲಾ ಮುಖ್ಯಶಿಕ್ಷಕರು ನಗರಸಭೆ ಅಧಿಕಾರಿಗಳಿಗೆ ಲಿಖೀತ ಹಾಗೂ ಮೌಖೀಕವಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಬಾವಿಗೆ ತಂತಿ ಬೇಲಿ ಅಳವಡಿಸುವಂತೆ ಮನವಿ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next