Advertisement

ಜಲ್ಲಿಕಟ್ಟು;ತುರ್ತು ಸುಗ್ರೀವಾಜ್ಞೆ ಹೊರಡಿಸಿ;ಪ್ರಧಾನಿಗೆ ಸಿಎಂ ಸೆಲ್ವಂ

03:22 PM Jan 19, 2017 | udayavani editorial |

ಹೊಸದಿಲ್ಲಿ : ತಮಿಳು ನಾಡಿನ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧದ ತೆರವನ್ನು ಆಗ್ರಹಿಸಿ ಚೆನ್ನೈನ ಮರೀನಾ ಬೀಚ್‌ನಲ್ಲಿ  ಸಹಸ್ರಾರು ಜನರು ಪ್ರತಿಭಟನೆ ನಿರತರಾಗಿರುವ ನಡುವೆಯೇ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಜಲ್ಲಿಕಟ್ಟು ನಿಷೇಧದಿಂದ ರಾಜ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಾಗೂ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಅಧ್ಯಾದೇಶವೊಂದನ್ನು ತರುವಂತೆ ಕೋರಿದ್ದಾರೆ.

Advertisement

ಜಲ್ಲಿಕಟ್ಟು ಕ್ರೀಡೆಯ ಮೇಲೆ ಸುಪ್ರೀಂ ಕೋರ್ಟ್‌ ಹೇರಿರುವ ನಿಷೇಧವನ್ನು ತೆರವುಗೊಳಿಸುವ ಸಲುವಾಗಿ ಸುಗ್ರೀವಾಜ್ಞೆಯನ್ನು ತರುವ ಅಗತ್ಯದ ಬಗ್ಗೆ ತಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿರುವುದಾಗಿ ಸೆಲ್ವಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

“ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಪ್ರಧಾನಿಗೆ ನಾವು ಮನವಿಯನ್ನು ಅರ್ಪಿಸಿದ್ದೇವೆ; ಈ ಸಂಬಂಧ ಸುಗ್ರೀವಾಜ್ಞೆಯನ್ನು ತರುವಂತೆ ಕೇಳಿಕೊಂಡಿದ್ದೇವೆ’ ಎಂದು ಸೆಲ್ವಂ ಹೇಳಿದರು. 

ತಮಿಳು ನಾಡಿನಲ್ಲಿ ಪೊಂಗಲ್‌ ಸಂದರ್ಭದಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯು ರಾಜ್ಯದ ಅತ್ಯಂತ ಮಹತ್ವದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕ್ರೀಡೆಯಾಗಿದೆ ಎಂದು ಸೆಲ್ವಂ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next