ಹೊಸದಿಲ್ಲಿ: ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಆಚರಣೆ ಯಲ್ಲಿರುವ “ಜಲ್ಲಿಕಟ್ಟು” ಕ್ರೀಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್ನ ಸಾಂವಿಧಾನಿಕ ಪೀಠ ಗುರುವಾರ ತನ್ನ ತೀರ್ಪು ಪ್ರಕಟಿಸಲಿದೆ.
ಪ್ರಾಣಿ ಹಕ್ಕುಗಳ ಸಂರಕ್ಷಣ ಸಂಸ್ಥೆ ಪೆಟಾ ಜಲ್ಲಿಕಟ್ಟು ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಯನ್ನು ನ್ಯಾ| ಕೆ.ಎಂ ಜೋಸೆಫ್, ನ್ಯಾ| ಅಜಯ್ ರಸ್ತೋಗಿ, ನ್ಯಾ| ಅನಿರುದ್ಧ ಬೋಸ್, ನ್ಯಾ| ಹೃಷಿಕೇಶ್ ರಾಯ್ ಹಾಗೂ ನ್ಯಾ| ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಜಲ್ಲಿಕಟ್ಟು ಕೇವಲ ಸಾಂಪ್ರ ದಾಯಿಕ ಆಚರಣೆಯಾಗಿದ್ದು, ಪ್ರಾಣಿ ಗಳನ್ನು ಹಿಂಸಿಸುವ ಯಾವುದೇ ಉದ್ದೇಶ ವಿಲ್ಲ. ಪೆರು, ಕೊಲಂಬಿಯಾ, ಸ್ಪೇನ್ ಸಹಿತ ಹಲವು ರಾಷ್ಟ್ರಗಳಲ್ಲೂ ಇಂಥ ಆಚರಣೆ ಗಳಿವೆ ಎಂದು ತಮಿಳುನಾಡು ಸರಕಾರ ವಾದಿಸಿತ್ತು.