Advertisement

ಜಲ್ಲಿಕಟ್ಟು ಕಾಳಗ : ಗೆದ್ದ ಜನಾಕ್ರೋಶ, ಅಧ್ಯಾದೇಶಕ್ಕೆ ಕೇಂದ್ರ ಅಸ್ತು

03:45 AM Jan 21, 2017 | Team Udayavani |

ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ಜನಪ್ರಿಯ ಗೂಳಿ ಕ್ರೀಡೆಯಾದ ನಿಷೇಧಿತ ಜಲ್ಲಿಕಟ್ಟು ಪರ ಜನಾಕ್ರೋಶ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರಕಾರ ಕೊನೆಗೂ ಅಧ್ಯಾದೇಶ ಹೊರಡಿಸಲು ಅನುಮೋದನೆ ನೀಡಿದೆ. ಈಗ ರಾಷ್ಟ್ರಪತಿಗಳ ಅಂಕಿತ ದೊರಕಿ, ಬಳಿಕ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರೆ ಜಲ್ಲಿಕಟ್ಟು ಮೇಲಿನ ನಿಷೇಧ ರದ್ದಾಗಿ ಸಕ್ರಮ ಗೊಳ್ಳಲಿದೆ. ಈ ಎಲ್ಲ ಪ್ರಕ್ರಿಯೆ ಶನಿವಾರ ಸಂಜೆಯೊಳಗೆ ಮುಗಿ ಯುವ ನಿರೀಕ್ಷೆಯಿದ್ದು ಇನ್ನು 2 ದಿನದೊಳಗೆ ತಮಿಳುನಾಡಿನಲ್ಲಿ ಗೂಳಿ ಕ್ರೀಡೆಯ ಕಹಳೆ ಮೊಳಗು ವುದು ನಿಶ್ಚಿತವಾಗಿದೆ.

Advertisement

ಸರ್ವೋಚ್ಚ ನ್ಯಾಯಾಲಯ “ಜಲ್ಲಿಕಟ್ಟು ಕ್ರೀಡೆ ಪ್ರಾಣಿಗಳು ಹಾಗೂ ಮಾನವನಿಗೆ ಅಪಾಯಕಾರಿ’ ಎಂದು ಕಾರಣ ನೀಡಿ ತಡೆ ವಿಧಿಸಿದ್ದರಿಂದ ಆಕ್ರೋಶಗೊಂಡಿದ್ದ ತಮಿಳುನಾಡು ಜನ, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬೀದಿಗಿಳಿದು ಕಳೆದ 4 ದಿನಗಳಿಂದ ಹೋರಾಟ ಆರಂಭಿಸಿದ್ದರು. ಈಗ ಅಧ್ಯಾದೇಶಕ್ಕೆ ಅಂತಿಮ ಮೊಹರು ಬಿದ್ದರೆ ಈ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಂತಾಗಲಿದೆ. ಪ್ರತಿಭಟನಕಾರರು ಸರಕಾರದ ನಡೆಯನ್ನು ಸ್ವಾಗತಿಸಿದ್ದರೂ ಕ್ರೀಡೆಯನ್ನು ಹಮ್ಮಿಕೊಳ್ಳುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮಧುರೈ ಬಳಿಯ ಅಲಂಗನಲ್ಲೂರು ಜಲ್ಲಿಕಟ್ಟು ನಡೆಯುವ ಕೇಂದ್ರ ಸ್ಥಾನವಾಗಿದೆ. ಇನ್ನು 2 ದಿನದಲ್ಲಿ ಇಲ್ಲಿ ತಮಿಳುನಾಡಿನ ಕುರುಹು ಎಂಬಂತಿರುವ ಈ ಕ್ರೀಡೆ ಆಯೋಜನೆ ಆಗುವ ಸಾಧ್ಯತೆ ಇದೆ. ಅಲ್ಲದೆ ಸ್ವತಃ ಸಿಎಂ ಪನ್ನೀರ್‌ಸೆಲ್ವಂ ತಾವೇ ಇನ್ನೆರಡು ದಿನಗಳಲ್ಲಿ ಜಲ್ಲಿಕಟ್ಟು ಕ್ರೀಡೆ ಉದ್ಘಾಟಿಸುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next