Advertisement

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಲ್ಲಿ ಆಯ್ಕೆ

01:11 PM Jul 19, 2020 | Suhan S |

ಆಲಮಟ್ಟಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿಡಗುಂದಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

Advertisement

ಕಾನಿಪ ಸರ್ವ ಸದಸ್ಯರ ಸಭೆಯಲ್ಲಿ ಪತ್ರಕರ್ತ ಎಸ್‌.ಎಂ. ಜಲ್ಲಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಮುತ್ತು ಕುಪ್ಪಸ್ತ (ನಗರ ಉಪಾಧ್ಯಕ್ಷ), ಡಿ.ಬಿ. ಕುಪ್ಪಸ್ತ (ಗ್ರಾಮೀಣ ಉಪಾಧ್ಯಕ್ಷ), ಮಲ್ಲಿಕಾರ್ಜುನಯ್ಯ ತೋರಗಲ್ಲಮಠ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಹಿರೇಮಠ (ಖಜಾಂಚಿ) ಆಯ್ಕೆಯಾದರು.

ನಂತರ ನೂತನ ಅಧ್ಯಕ್ಷ ಶಂಕರ ಜಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಶ್ರೇಷ್ಠವಾಗಿದೆ. ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗ್ರಾಮೀಣ ಪತ್ರಕರ್ತರ ಶ್ರಮ ಶ್ಲಾಘನೀಯ. ಸರಕಾರ ಉಚಿತ ಬಸ್‌ಪಾಸ್‌, ಆರೋಗ್ಯ ವಿಮೆ ಸೇರಿದಂತೆ ಅಗತ್ಯಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಸಭೆ ಅಧ್ಯಕ್ಷತೆಯನ್ನು ನಗರ ಉಪಾಧ್ಯಕ್ಷ ಮುತ್ತು ಕುಪ್ಪಸ್ತ ವಹಿಸಿದ್ದರು. ಸಭೆಯಲ್ಲಿ ಹಿರಿಯ ಪತ್ರಕರ್ತ ಬಾಬು ಮುರಾಳ, ಬಸಲಿಂಗಯ್ಯ ಮಠಪತಿ, ಮಹೇಶ ಅಡಾಳಿ, ಬಸವರಾಜ ಹೆರಕಲ್ಲ, ಮುಕುಂದ ಗವಳಿ, ಮಹ್ಮದ್‌ಅಲಿ ಮಕಾನದಾರ, ಚಂದ್ರಶೇಖರ ಬಳ್ಳಾರಿ, ಪ್ರಶಾಂತ ಹೂಗಾರ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next