ಮಂಡ್ಯ: ಜಲ ಜೀವನ್ ಮಿಷನ್ ಯೋಜನೆಯಡಿಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಶುದ್ಧ ನೀರಿನಯೋಜನೆ ಜಾರಿಗೊಳಿಸಲು ಜಿಲ್ಲಾ ಮಂತ್ರಿಗಳುಕ್ರಮ ವಹಿಸಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು.
ಕಳೆದ ಸರ್ಕಾರದಲ್ಲಿ ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ 1525 ಕೋಟಿ ರೂ.ವೆಚ್ಚದಲ್ಲಿ ಜಿಲ್ಲೆಯ ಜನರಿಗೆ ಶುದ್ಧ ನೀರು ಒದಗಿಸುವಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ್ದರು.ಅದನ್ನೇ ಈಗ 400 ಕೋಟಿ ರೂ.ಗೆ ಇಳಿಕೆ ಮಾಡಿಕೇವಲ 3 ತಾಲೂಕುಗಳಿಗೆ ಸೀಮಿತಗೊಳಿಸಿರುವುದುಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.
ಕೆ.ಆರ್.ಪೇಟೆ, ನಾಗಮಂಗಲ ಹಾಗೂಪಾಂಡವಪುರ ತಾಲೂಕುಗಳಿಗೆ ಈ ಯೋಜನೆಜಾರಿಯಾಗಲಿದೆ. ಇದನ್ನು ಎಲ್ಲ ತಾಲೂಕುಗಳಿಗೆವಿಸ್ತರಿಸಬೇಕು ಎಂದರು.ವಿಶೇಷ ಪ್ಯಾಕೇಜ್ ನೀಡಿ: ಲಾಕ್‌ಡೌನ್‌ನಿಂದಾಗಿಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.ಕೂಡಲೇ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು.ರೈತರ ಸಾಲಮನ್ನಾ ಘೋಷಿಸಬೇಕು. ಬೆಳೆ ಪರಿಹಾರನೀಡಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆಕಲ್ಪಿಸಬೇಕೆಂದರು.
ಸಂಪೂರ್ಣ ವಿಫಲ: ಸೋಂಕು ನಿವಾರಿಸಲುಆರೋಗ್ಯ ಇಲಾಖೆ ವಿಫಲವಾಗಿದೆ. ಈ ಹಿಂದೆ ಆಸ್ಪತ್ರೆಬಾಗಿಲಲ್ಲೇ ಮಹಿಳೆಗೆ ಹೆರಿಗೆಯಾಗಿ ಮಗುಸಾವನ್ನಪ್ಪಿರುವ ಘಟನೆ ನಡೆದಿರುವುದು ಮಿಮ್ಸ್‌ಆಡಳಿತ ವೈಖರಿ ಹೇಗಿದೆ ಎಂಬುದನ್ನು ರಾಜ್ಯಕ್ಕೆಗೊತ್ತಾಗಿದೆ. ಮಿಮ್ಸ್ ಆಡಳಿತ ಸಂಪೂರ್ಣವಿಫಲವಾಗಿದೆ. ಜಿಲ್ಲಾ ಆರೋಗ್ಯಾಧಿ ಕಾರಿ ನಿರ್ಲಕ್ಷ್ಯವಹಿಸಿದ್ದಾರೆಂದರು.
ಪರೀಕ್ಷಾ ಕಿಟ್ ನೀಡುತ್ತಿಲ್ಲ: ಜಿಲ್ಲೆಯಲ್ಲಿ ಹೆಚ್ಚು ಪರೀಕ್ಷೆನಡೆಸಬೇಕು. ಆದರೆ ಸರ್ಕಾರ ಪರೀûಾ ಕಿಟ್‌ನೀಡುತ್ತಿಲ್ಲ. ಜಗಳವಾಡಿ ಕಿಟ್ ತರಿಸುವಂಥ ಪರಿಸ್ಥಿತಿನಿರ್ಮಾಣ ಮಾಡಲಾಗಿದೆ. ಸರಿಯಾಗಿ ಪರೀಕ್ಷೆನಡೆಸದ ಹಿನ್ನೆಲೆ ಸೋಂಕಿತರು ಹೆಚ್ಚಾಗುತ್ತಿದ್ದಾರೆ.ಸರ್ಕಾರ ಸೋಂಕು ಇಳಿಕೆ ಮಾಡುತ್ತಿದ್ದೇವೆ ಎಂದುತೋರಿಸಿಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆ ಕಡಿಮೆ ಮಾಡಿದೆ.ಇನ್ನು ಸರ್ಕಾರ ಸೋಂಕಿತರ ಪ್ರಾಥಮಿಕ ಸಂಪರ್ಕದವರನ್ನು ಪತ್ತೆ ಹಚ್ಚಿ ಸೋಂಕು ಹರಡದಂತೆ ಕ್ರಮವಹಿಸಬೇಕು ಎಂದರು.ಶಾಸಕರಾದ ಕೆ.ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ,ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.