Advertisement
ಕೆಡಿಪಿ ನಾಮನಿರ್ದೇಶಿತ ಸದಸ್ಯ ಮೆಲ್ವಿನ್ ಡಿ’ಸೋಜಾ ಮಾತನಾಡಿ, ಅಡ್ಯಾರ್ ಮತ್ತು ನೀರುಮಾರ್ಗದಲ್ಲಿ ಈ ಯೋಜನೆಯಡಿ ಮಾಡಲಾಗಿರುವ ಕೆಲಸಗಳು ತೀರಾ ಕಳಪೆ. ಓವರ್‌ಹೆಡ್ ಟ್ಯಾಂಕ್ ಅಂದಾಜುಪಟ್ಟಿಯಂತೆ ಮಾಡಲಾಗಿಲ್ಲ. ಪೈಪ್‌ಲೈನ್ ಇರುವಲ್ಲಿಯೇ ಮತ್ತೆ ಜೋಡಣೆ ಮಾಡಲಾಗಿದ್ದು, ಇಲ್ಲದಿರುವಲ್ಲಿ ಸಂಪರ್ಕ ವ್ಯವಸ್ಥೆ ಮಾಡಿಲ್ಲ. ನೀರಿನ ಮೂಲವನ್ನೇ ಗುರುತಿಸಲಾಗಿಲ್ಲ ಎಂದರು. ಪರಿಷತ್ ಸದಸ್ಯ ಡಾ| ಮಂಜುನಾಥ ಭಂಡಾರಿ, ನೀರಿನ ಮೂಲವನ್ನೇ ಗುರುತಿಸದಿದ್ದರೆ ಕಾಮಗಾರಿ ಕೈಗೊಂಡು ಪ್ರಯೋಜನವೇನು ಎಂದು ಪ್ರಶ್ನಿಸಿದರು.
ದ.ಕ. ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್‌ನ 29 ಬ್ಲಾಕ್‌ಗಳಲ್ಲಿ 40,000 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ಸಾಕಷ್ಟು ಮರಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್ ಸ್ಪಷ್ಟಪಡಿಸಿದರು. ಸಿಆರ್‌ಝಡ್‌ನಿಂದ ಷರತ್ತಿನೊಂದಿಗೆ ಮರಳುಗಾರಿಕೆಗೆ ಎನ್‌ಜಿಟಿಯಿಂದ ಆದೇಶವಾಗಿದೆ. ಆದರೆ ವಿತರಣೆ ಮತ್ತು ವ್ಯಾಪಾರಕ್ಕೆ ಗಣಿ ಇಲಾಖೆಯಿಂದ ಸ್ಪಷ್ಟನೆ ನೀಡಬೇಕಾಗಿದೆ. ಅದಕ್ಕಾಗಿ 7 ಸದಸ್ಯರ ಸಮಿತಿ ಸಭೆ ಮಾಡಿ ನಿರ್ಧರಿಸಬೇಕಾಗಿದೆ. ಎಂದರು.
ಬೆಳ್ತಂಗಡಿ ವ್ಯಾಪ್ತಿಯಲ್ಲಿ ಸರಕಾರಿ ಕಾಮಗಾರಿ ಸೇರಿದಂತೆ ಸಾರ್ವಜನಿಕವಾಗಿ ಒಂದು ಹಿಡಿ ಮರಳು ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ ಆಕ್ಷೇಪಿಸಿದರೆ, ದುಪ್ಪಟ್ಟು ಬೆಲೆಗೆ ಅಕ್ರಮ ಮರಳು ಸಿಗುತ್ತದೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.
Related Articles
ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವ ನಡುವೆಯೇ ಕಿಂಡಿ ಅಣೆಕಟ್ಟುಗಳಲ್ಲಿ ಇನ್ನೂ ಸರಿಯಾಗಿ ಹಲಗೆ ಇಳಿಸುವ ಕೆಲಸ ನಡೆಯದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಜಿಲ್ಲೆಯಲ್ಲಿ 447 ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿದ್ದು, 292ರ ನಿರ್ವಹಣೆಗೆ 3 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ ಎಂದು ಅಧಿಕಾರಿ ಉತ್ತರಿಸಿದರು.
Advertisement
ಮಂಗಳೂರು, ಧರ್ಮಸ್ಥಳ ಪ್ಲಾಸ್ಟಿಕ್ ಮುಕ್ತನಗರಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಪೈಲಟ್ ಯೋಜನೆಗೆ ಮಂಗಳೂರು ಹಾಗೂ ಧರ್ಮಸ್ಥಳ ಆಯ್ಕೆಯಾಗಿವೆ. ಅವುಗಳನ್ನು ಮೊದಲು ಮಾದರಿಯಾಗಿಸಬೇಕು ಎಂದು ಸಚಿವ ದಿನೇಶ್ ಸೂಚಿಸಿದರು. ಕೋಳಿ ಅಂಕ ವಿಚಾರ
ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಅನುಮತಿಗಾಗಿ ಅಲೆದಾಡುವ ಸ್ಥಿತಿ ಇದೆ. ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಎಸ್‌ಪಿ ಸಿ.ಬಿ. ರಿಷ್ಯಂತ್ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಕೋಳಿ ಅಂಕಕ್ಕೆ ಅನುಮತಿ ನೀಡುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆ ರೀತಿ ಅನುಮತಿಗಾಗಿ ಅಲೆದಾಡಿರುವ ದಾಖಲೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಹಮೀದ್ ಕಿನ್ಯ, ಸುಜಯ ಕೃಷ್ಣ, ರಾಜಶೇಖರ ಜೈನ್ ಉಪಸ್ಥಿತರಿದ್ದರು. ಶಾಸಕರ ವಾಗ್ವಾದ
ಹೊಸ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ಡಯಾಲಿಸಿಸ್ ಯಂತ್ರಗಳ ವ್ಯವಸ್ಥೆ ಉತ್ತಮವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದಾಗ ಕೆರಳಿದ ವೇದವ್ಯಾಸ ಕಾಮತ್, 8 ತಿಂಗಳಿನಿಂದ ರಾಜ್ಯದಲ್ಲೆಡೆ ಡಯಾಲಿಸಿಸ್ ಯಂತ್ರಗಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. 75 ವರ್ಷಗಳಲ್ಲಿ ವೆನಾÉಕ್‌ನಲ್ಲಿ ಸಮರ್ಪಕ ಬೆಡ್ ವ್ಯವಸ್ಥೆಯೇ ಇರಲಿಲ್ಲ. ಕಳೆದ ನಮ್ಮ ಅವಧಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು. ಶಾಸಕರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೆಯೇ ಸಚಿವರು ಮಧ್ಯಪ್ರವೇಶಿಸಿ, ಕೊರೊನಾ ಅವಧಿಯಲ್ಲಿ ಎಲ್ಲ ಕಡೆ ಆರೋಗ್ಯ ಇಲಾಖೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಡಯಾಲಿಸಿಸ್ ಯಂತ್ರಗಳಲ್ಲಿ ಹಿಂದಿನ ವ್ಯವಸ್ಥೆಯಲ್ಲಿ ಹಲವು ಕಾರಣಗಳಿಂದ ತೊಂದರೆ ಆಗಿದ್ದನ್ನು ಸರಿಪಡಿಸಿ ಹೊಸ ವ್ಯವಸ್ಥೆ ಮಾಡಲಾಗಿದೆ ಎಂದರು.