Advertisement

ಜಲಿಯನ್‌ವಾಲಾ ಬಾಗ್‌ ಸ್ಮಾರಕಕ್ಕೆ ನವಸ್ಪರ್ಶ : ವೀಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ

11:21 PM Aug 28, 2021 | Team Udayavani |

ಅಮೃತಸರ: ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಘಟ್ಟವಾದ ಜಲಿಯನ್‌ವಾಲಾ ಬಾಗ್‌ ಸ್ಮಾರಕದ ಪುನರುತ್ಥಾನ ಕಾಮಗಾರಿ ಮುಕ್ತಾಯವಾಗಿದ್ದು, ಹೊಸ ಸ್ವರೂಪದಲ್ಲಿ ಕಂಗೊಳಿಸುತ್ತಿರುವ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ, ಶನಿವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ ಗೊಳಿಸಿದ್ದಾರೆ.

Advertisement

ಉದ್ಘಾಟನ ಸಮಾರಂಭದಲ್ಲಿ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ 2 ನಿಮಿಷಗಳ ಕಾಲ ಮೌನಾಚರಣೆ ಕೈಗೊಳ್ಳಲಾಯಿತು. ಸ್ಮಾರಕದಲ್ಲಿ ಹೊಸ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ.

1919ರ ಎ.13ರಂದು, ಜಲಿಯನ್‌ವಾಲಾಬಾಗ್‌ನಲ್ಲಿ ಸ್ವಾತಂತ್ರ್ಯ ಹೋರಾಟದ ಬಹಿರಂಗ ಸಭೆ ನಡೆಯುತ್ತಿದ್ದಾಗ, ಅದರ ಏಕೈಕ ಪ್ರವೇಶದ್ವಾರದ ಮೂಲಕ ಒಳನುಗ್ಗಿದ ಬ್ರಿಟಿಷ್‌ ಸೈನ್ಯ, ಅಲ್ಲಿದ್ದವರ ಮೇಲೆ ಗುಂಡಿನ ಮಳೆಗರೆದಿತ್ತು. ಹೆಂಗಸರು, ಮಕ್ಕಳು, ವೃದ್ಧರು ಸೇರಿ ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಇದನ್ನೂ ಓದಿ :ಪದ್ಮ ಪ್ರಶಸ್ತಿಗೆ 3 ವೈದ್ಯರ ಹೆಸರು ಅಂತಿಮ : ಅರವಿಂದ ಕೇಜ್ರಿವಾಲ್‌

Advertisement

Udayavani is now on Telegram. Click here to join our channel and stay updated with the latest news.

Next