Advertisement

ಜಾಲತಾಣದಿಂದಾಗಿ ಸಿಕ್ಕಿತು 150 ವರ್ಷ ಹಿಂದಿನ ಗೌನ್‌

03:45 AM Feb 13, 2017 | Team Udayavani |

ಲಂಡನ್‌: ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಿಂದ ಅನಾಹುತಗಳಾಗುತ್ತವೆಂಬ ಆರೋಪಗಳಿವೆ. ಕೆಲವೊಮ್ಮೆ ಅಚ್ಚರಿಗಳೂ ಉಂಟಾಗುತ್ತವೆ ಎಂಬುದಕ್ಕೆ ನಿದರ್ಶನ ಇಲ್ಲಿದೆ.

Advertisement

ಸ್ಕಾಟ್‌ಲ್ಯಾಂಡ್‌ನ‌ ಮೊರ್ಹಾಮ್‌ನ ತೆಸ್‌ ನೆವಲ್‌ ಎಂಬುವರ ಕುಟುಂಬಕ್ಕೆ 1870ರಿಂದಲೂ ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿದ್ದ ಗೌನ್‌ ಕಾಣೆಯಾಗಿತ್ತು. ಡ್ರೈ ಕ್ಲೀನಿಂಗ್‌ಗಾಗಿ ನೀಡಿದ್ದ ವೇಳೆ ಅದು ಕಳೆದು ಹೋಗಿತ್ತು. ಅದನ್ನು ನೆವೆಲ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಯಾರಿಗಾದರೂ ಗೌನ್‌ ದೊರೆತರೆ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಈ ಮನವಿ 2 ಲಕ್ಷ ಬಾರಿ ಶೇರ್‌ ಆಗಿ. ಕಡೆಗೂ ವ್ಯಕ್ತಿಯೊಬ್ಬರು ಈ ವಸ್ತ್ರದ ಗುರುತು ಹಿಡಿದು ಅದನ್ನು ಕುಟುಂಬಕ್ಕೆ ತಲುಪಿಸಿದ್ದಾರೆ. ಮಳಿಗೆ ಇದ್ದ ಸ್ಥಳದಲ್ಲಿಯೇ ಅದು ಬಿದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next