Advertisement

ಆತಂಕ ಸೃಷ್ಟಿಸಿದ ಜಲಸಿರಿ ಕುಡಿಯುವ ನೀರು

11:49 AM Sep 19, 2022 | Team Udayavani |

ಕುಂದಾಪುರ: ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ 24 ತಾಸು ನಿರಂತರ ಕುಡಿಯುವ ನೀರು ಸರಬರಾಜು ಯೊಜನೆ ಯಡಿಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಶುಚಿಯಾಗಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿದೆ. ನಗರದ ಕೆಲವು ಭಾಗದಲ್ಲಿ ಸರಬರಾಜಾಗುತ್ತಿರುವ ನೀರು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

Advertisement

ಪುರಸಭೆ ವ್ಯಾಪ್ತಿಯಲ್ಲಿನ ಚಿಕನ್‌ ಸಾಲ್‌, ಸಂಗಮ್‌ ರಸ್ತೆಯಲ್ಲಿನ ಮನೆಗಳಲ್ಲಿ ಜಲಸಿರಿಯ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ಅನುಮಾನ ಆರಂಭವಾಗಿದೆ. ನಲ್ಲಿಗಳಲ್ಲಿ ಸರಬರಾಜಾಗುವ ನೀರು ಸಾಬೂನಿನ ನೊರೆಯಂತೆ ತೋರುತ್ತಿದ್ದು, ಸ್ವಲ್ಪ ಸಮಯದ ಅನಂತರ ನೊರೆ ಮಾಯವಾಗುತ್ತದೆ. ಹೀಗೆ ಸರಬರಾಜಾದ ಕುಡಿಯುವ ನೀರು ಶುದ್ಧವೋ, ಅಶುದ್ಧವೋ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಸಾವಜನಿಕರು ನೀರಿನಲ್ಲಾಗುವ ಬದಲಾವಣೆಗಳನ್ನು ಗಮನಿಸಿ ಆತಂಕಗೊಂಡು ಕಳವಳ ವ್ಯಕ್ತಪಡಿಸಿದ್ದು, ಈ ಕಲುಷಿತ ನೀರಿನ ಸೇವನೆಯಿಂದ ಅನೇಕರಿಗೆ ಆರೋಗ್ಯದಲ್ಲಿ ಏರುಪೇರು ಆಗಿ ಈಗಾಗಲೇ ಅನಾರೋಗ್ಯ ಕಾಣಿಸಿಕೊಂಡಿದೆ ಎಂದೂ ಹೇಳುತ್ತಾರೆ.

ನೀರಿನ ಗುಣಮಟ್ಟವನ್ನು ಪ್ರತಿ ಹಂತದಲ್ಲೂ ಪರೀಕ್ಷಿಸಿ ಸರಬರಾಜು ಮಾಡಲಾಗುತ್ತದೆ ಎನ್ನುವುದು ಈ ಯೋಜನೆಯ ಮುಖ್ಯ ಆಶ್ವಾಸನೆ. ಈ ನಿಟ್ಟಿನಲ್ಲಿ ಯೋಜನೆಯನ್ನು ನಿರ್ವಹಣೆ ಮಾಡುವ ಸಂಸ್ಥೆ ಈ ಕುರಿತು ಪರಿಶೀಲನೆ ನಡೆಸಬೇಕಿದೆ. ಸಾರ್ವಜನಿಕರ ಸಂಶಯ ನಿವಾರಿಸಬೇಕಿದೆ.

ಈ ಕಲುಷಿತ ನೀರು ಕುಡಿದು ಅನೇಕರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ತತ್‌ಕ್ಷಣ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಸಂಬಂಧ ಅಧಿ ಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿ ಕಾರಿಗಳು ಎಚ್ಚೆತ್ತುಕೊಂಡು ನೀರನ್ನು ಪರಿಶೀಲಿಸಿ (ಪರೀಕ್ಷಿಸಿ) ಕುಡಿಯಲು ಯೋಗ್ಯವಾಗಿದ್ದಲ್ಲಿ ಮಾತ್ರ ನೀರನ್ನು ಸರಬರಾಜು ಮಾಡಿ. ಜನರ ಆರೋಗ್ಯವನ್ನು ಕಾಪಾಡಿ. -ಕೋಡಿ ಅಶೋಕ್‌ ಪೂಜಾರಿ, ಸಾಮಾಜಿಕ ಕಾರ್ಯಕರ್ತರು.

Advertisement

Udayavani is now on Telegram. Click here to join our channel and stay updated with the latest news.

Next