Advertisement

2023ರ ಅಂತ್ಯದೊಳಗೆ ಪ್ರತೀ ಮನೆಗೆ ನಳ್ಳಿ ನೀರು 

10:35 PM Apr 07, 2022 | Team Udayavani |

ಮಂಗಳೂರು: ಜಲಜೀವನ್‌ ಮಿಷ‌ನ್‌ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2023ರ ಅಂತ್ಯದೊಳಗೆ ಪ್ರತೀ ಮನೆಗೆ ನಳ್ಳಿ ನೀರು ಸಂಪರ್ಕವನ್ನು ಒದಗಿಸುವುದು ಉದ್ದೇಶವಾಗಿದೆ. ಅನುಷ್ಠಾನ ಅಧಿಕಾರಿಗಳು ಇದನ್ನು ಯಶಸ್ವಿಯಾಗಿ ಜಾರಿಗೊಳಿಸ ಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌ ಹೇಳಿದರು.

Advertisement

ಅವರು ಬುಧವಾರ ಜಿಲ್ಲಾ ಪಂಚಾಯತ್‌ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಎಂಜಿನಿಯರ್‌ಗಳಿಗಾಗಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತೀ ವ್ಯಕ್ತಿಗೆ ಜೀವಿಸುವ ಹಕ್ಕು ಇರುವಂತೆಯೇ ಶುದ್ಧ ಕುಡಿಯುವ ನೀರನ್ನು ಪಡೆಯುವ ಹಕ್ಕು ಕೂಡ ಇದೆ. ಜಲ, ಜೀವ ಮತ್ತು ಜೀವನ ಈ ಮೂರು ಅಂಶಗಳು ಒಂದಕ್ಕೊಂದು ಪೂರಕ. ಅದ್ದರಿಂದ ಜಲ ಸಂರಕ್ಷಣೆ, ಮಿತ ಬಳಕೆ ಹಾಗೂ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

3 ಹಂತಗಳಲ್ಲಿ  700 ಕಾಮಗಾರಿ :

ಜಿಲ್ಲೆಯಲ್ಲಿ ಈ ಯೋಜನೆಯಡಿ ಒಟ್ಟು 3 ಹಂತಗಳಲ್ಲಿ 700 ಕಾಮ ಗಾರಿಗಳನ್ನು 516 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, 1ನೇ ಹಂತದಲ್ಲಿ 468 ಕಾಮಗಾರಿಗಳನ್ನು 179 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ. ಈವರೆಗೆ 239 ಕಾಮಗಾರಿ ಪೂರ್ಣ ಗೊಂಡಿವೆ. ಸುಮಾರು 29,000 ವೈಯಕ್ತಿಕ ನಳ್ಳಿ ನೀರು ಸಂಪರ್ಕಗಳಿಗೆ ಫಲಾನುಭವಿಗಳನ್ನು ಗುರುತಿ ಸಲಾಗಿದೆ. 2ನೇ ಹಂತದಲ್ಲಿ ಒಟ್ಟು 124 ಕಾಮಗಾರಿಗಳನ್ನು 210 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜಿಸಲಾಗಿದ್ದು, ಪ್ರಸ್ತುತ ಟೆಂಡರ್‌, ಕಾರ್ಯಾದೇಶ ಹಾಗೂ ಕಾಮಗಾರಿ ಪ್ರಾರಂಭ ಹಂತದಲ್ಲಿರುತ್ತದೆ. 3ನೇ ಹಂತದಲ್ಲಿ ಒಟ್ಟು 108 ಕಾಮಗಾರಿಗಳನ್ನು 127 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜಿಸಲಾಗಿದ್ದು, ಡಿಪಿಆರ್‌ ತಯಾರಿಕ ಹಂತದಲ್ಲಿದೆ ಎಂದರು.

Advertisement

ಜಿಲ್ಲೆಯಲ್ಲಿ ಸುಸ್ಥಿರ ಜಲಮೂಲವನ್ನು ಆಧರಿಸಿ ಒಟ್ಟು 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು 487 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜಿಸಲಾಗಿದ್ದು, 2 ಕಾಮ ಗಾರಿಗಳು ಟೆಂಡರ್‌ ಅನುಮೋದನೆ ಹಂತದಲ್ಲಿವೆ. ಉಳಿದ 5 ಕಾಮಗಾರಿಗಳ ಪ್ರಾಥಮಿಕ ಯೋಜನಾ ವರದಿಯು ತಯಾರಿಕೆಯ ಹಂತದಲ್ಲಿದೆ ಎಂದು ವಿವರಿಸಿದರು.

ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯದ ಮೈಸೂರು ವೃತ್ತದ ಅಧೀಕ್ಷಕ ಎಂಜಿನಿಯರ್‌ ಕೆ.ಎನ್‌. ಕೃಷ್ಣಮೂರ್ತಿ, ಬೆಂಗಳೂರು ಕೇಂದ್ರ ಕಚೇರಿಯ ಅಧೀಕ್ಷಕ ಎಂಜಿನಿಯರ್‌ ನರಸಿಂಹರಾಜು, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್‌ ಮಸಗುಪ್ಪಿ ಮತ್ತು ಎಂ.ಆರ್‌. ರಾಮಚಂದ್ರಯ್ಯ ಉಪಸ್ಥಿತರಿದ್ದರು.

ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮಂಗಳೂರಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ. ನರೇಂದ್ರ ಬಾಬು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next