Advertisement

ICC Players; ಯಶಸ್ವಿ ಜೈಸ್ವಾಲ್‌ , ಅನ್ನಾಬೆಲ್‌: ಐಸಿಸಿ ತಿಂಗಳ ಕ್ರಿಕೆಟಿಗರು

11:55 PM Mar 12, 2024 | Team Udayavani |

ದುಬಾೖ: ಭಾರತದ ಡ್ಯಾಶಿಂಗ್‌ ಓಪನರ್‌ ಯಶಸ್ವಿ ಜೈಸ್ವಾಲ್‌ ಮತ್ತು ಆಸ್ಟ್ರೇಲಿ ಯದ ವನಿತಾ ಆಲ್‌ರೌಂಡರ್‌ ಅನ್ನಾಬೆಲ್‌ ಸದರ್ಲೆಂಡ್‌ ಐಸಿಸಿಯ ಫೆಬ್ರವರಿ ತಿಂಗಳ ಆಟಗಾರರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಯುವ ಆರಂಭಕಾರ ಯಶಸ್ವಿ ಜೈಸ್ವಾಲ್‌ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 2 ದ್ವಿಶತಕ ಸೇರಿದಂತೆ 712 ರನ್‌ ಬಾರಿಸಿ ಭಾರತದ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯೊಂದರಲ್ಲಿ ಭಾರತದ ಕ್ರಿಕೆಟಿಗನೋರ್ವ ಬಾರಿಸಿದ ಅತ್ಯಧಿಕ ಮೊತ್ತದ ದಾಖಲೆ ಆಗಿದೆ. ಫೆಬ್ರವರಿಯಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ ಜೈಸ್ವಾಲ್‌ ಗಳಿಕೆ 560 ರನ್‌. ಸರಾಸರಿ 112.

“ಐಸಿಸಿ ಪ್ರಶಸ್ತಿ ಒಲಿದುದಕ್ಕೆ ಬಹಳ ಖುಷಿ ಯಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಶಸ್ತಿ ಗಳಿಗೆ ಪಾತ್ರರಾಗಬೇಕಿದೆ’ ಎಂಬುದಾಗಿ ಜೈಸ್ವಾಲ್‌ ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿ ರೇಸ್‌ನಲ್ಲಿದ್ದ ಇತರ ಪ್ರಮುಖರೆಂದರೆ ಕೇನ್‌ ವಿಲಿಯಮ್ಸನ್‌ ಮತ್ತು ಪಥುಮ್‌ ನಿಸ್ಸಂಕ.

5ನೇ ಆಟಗಾರ್ತಿ
ಅನ್ನಾಬೆಲ್‌ ಸದರ್ಲೆಂಡ್‌ ಐಸಿಸಿ ತಿಂಗಳ ಪ್ರಶಸ್ತಿಗೆ ಭಾಜನರಾದ ಆಸ್ಟ್ರೇಲಿಯದ 5ನೇ ಆಟಗಾರ್ತಿ.
ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾದ ಟೆಸ್ಟ್‌ ಪಂದ್ಯಗಳಲ್ಲಿ ಸದರ್ಲೆಂಡ್‌ 229 ರನ್‌ ಜತೆಗೆ 7 ವಿಕೆಟ್‌ ಸಂಪಾದಿಸಿದ್ದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದವರೆಂದರೆ ಯುಎಇಯ ಇಶಾ ಓಝಾ ಮತ್ತು ಕವಿಶಾ ಎಗೊಡೇಜ್‌.

Advertisement

Udayavani is now on Telegram. Click here to join our channel and stay updated with the latest news.

Next