Advertisement

ಜಮ್ಮು-ಕಾಶ್ಮೀರ: ಜೈಶ್ ಉಗ್ರನ ಬಂಧನ, ಗ್ರೆನೇಡ್, ನಗದು ವಶಕ್ಕೆ

06:23 PM Nov 30, 2020 | Nagendra Trasi |

ಶ್ರೀನಗರ್: ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರನನ್ನು ಜಮ್ಮು-ಕಾಶ್ಮೀರ ಪೊಲೀಸರು ಸೋಮವಾರ(ನವೆಂಬರ್ 30, 2020) ಕುಪ್ವಾರಾದಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಂಧಿತ ಜೈಶ್ ಉಗ್ರನಿಂದ ಗ್ರೆನೇಡ್ ಹಾಗೂ 3.50 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.

ನವೆಂಬರ್ 19ರಂದು ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆಸಿದ್ದ ಎನ್ ಕೌಂಟರ್ ಗೆ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ನಾಲ್ವರು ಉಗ್ರರು ಸಾವನ್ನಪ್ಪಿದ್ದರು. ಅಂದು 11 ಎಕೆ 47 ರೈಫಲ್ಸ್, 3 ಪಿಸ್ತೂಲ್, 29 ಗ್ರೆನೇಡ್ಸ್ ಹಾಗೂ ಇತರ ವಸ್ತುಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿತ್ತು ಎಂದು ವರದಿ ತಿಳಿಸಿದೆ.

ಈ ಘಟನೆಯ ನಂತರ ಜಮ್ಮು-ಕಾಶ್ಮೀರದಲ್ಲಿ 26/11 ಮಾದರಿಯ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರರ ಸಂಚನ್ನು ವಿಫಲಗೊಳಿಸಿದ್ದ ಭದ್ರತಾ ಪಡೆಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ಕಲಂ ಅನ್ನು ರದ್ದುಪಡಿಸಿದ್ದ ನಂತರ ಮೊದಲ ಬಾರಿಗೆ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆ ನಡೆಸಲಾಗಿತ್ತು. ನವೆಂಬರ್ 19ರಿಂದ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 22ರಂದು ಮತಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next