Advertisement
ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮೋದಿ ಕಾರ್ಯಕ್ರಮ ಗುರಿಯಾಗಿರಿ ಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ. ಆ ಕುಕೃತ್ಯ ನಡೆಸುವ ಉಗ್ರರು ಈಗಾಗಲೇ ಭಾರತ ಪ್ರವೇಶ ಮಾಡಿರಬಹುದು ಎಂದು ಹೇಳಲಾಗಿದೆ. ಇತ್ತೀಚೆಗಿನ ಅಯೋಧ್ಯೆ ತೀರ್ಪು, ಪೌರತ್ವ ಕಾಯ್ದೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದು ಮುಂತಾದ ಬೆಳವಣಿಗೆಗಳಿಂದ ಕ್ರುದ್ಧಗೊಂಡಿರುವ ಉಗ್ರ ಸಂಘಟನೆಗಳು ಮೋದಿಯವರನ್ನು ಗುರಿ ಮಾಡಿ ದಾಳಿ ನಡೆಸುವ ಸಾಧ್ಯತೆಗಳು ಅಧಿಕವಾಗಿವೆ. Advertisement
ಮೋದಿ ರ‍್ಯಾಲಿ ಮೇಲೆ ಜೈಶ್ ಉಗ್ರರ ದಾಳಿ ಸಾಧ್ಯತೆ
10:12 AM Dec 21, 2019 | Team Udayavani |