ಹೈದರಾಬಾದ್: ಬುಧವಾರದ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು 45-25 ಅಂತರದಿಂದ ಮಣಿಸಿದ ಜೈಪುರ್ ಪಿಂಕ್ ಪ್ಯಾಂಥರ್ ಅಗ್ರಸ್ಥಾನಕ್ಕೆ ನೆಗೆಯಿತು.
ಅದೀಗ 69 ಅಂಕಗಳನ್ನು ಹೊಂದಿದೆ. ಪುನೇರಿ ಪಲ್ಟಾನ್ ಕೂಡ 69 ಅಂಕ ಹೊಂದಿದ್ದರೂ ಸ್ಕೋರ್ ವ್ಯತ್ಯಾಸದಲ್ಲಿ ಜೈಪುರವೇ ಮುಂದಿದೆ.
ಈ ಸೋಲಿನ ಹೊರತಾಗಿಯೂ ಬುಲ್ಸ್ 3ನೇ ಸ್ಥಾನದಲ್ಲೇ ಉಳಿದುಕೊಂಡಿದೆ (63 ಅಂಕ). ರೈಡರ್ ಭರತ್ (10 ಅಂಕ) ಹೊರತುಪಡಿಸಿ ಉಳಿದವರು ಮಿಂಚಲು ವಿಫಲರಾದದ್ದು ಬುಲ್ಸ್ ಹಿನ್ನಡೆಗೆ ಕಾರಣವಾಯಿತು.
ಜೈಪುರ್ ಪರ ರೈಡರ್ ಅರ್ಜುನ್ ದೇಶ್ವಾಲ್ ಅಮೋಘ ಪ್ರದರ್ಶನ ನೀಡಿ 13 ಅಂಕ ತಂದುಕೊಟ್ಟರು. ಇದು 19ನೇ ಪಂದ್ಯದಲ್ಲಿ ಜೈಪುರ್ ಸಾಧಿಸಿದ 13ನೇ ಗೆಲುವು. ಬುಲ್ಸ್ ಇಷ್ಟೇ ಪಂದ್ಯಗಳಿಂದ 11 ಜಯ ಗಳಿಸಿದೆ. ಇದು 7ನೇ ಸೋಲು.