ನವದೆಹಲಿ:ಪಶ್ಚಿಮಬಂಗಾಳದ ಕೋಲ್ಕತಾದ ನ್ಯೂ ಟೌನ್ ನಲ್ಲಿರುವ ವಸತಿ ಸಮುಚ್ಛಯದ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಪಂಜಾಬ್ ಮೂಲದ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಗಳು ಸಾವನ್ನಪ್ಪಿರುವ ಘಟನೆ ಬುಧವಾರ(ಜೂನ್ 09) ನಡೆದಿದೆ. ಘಟನೆಯಲ್ಲಿ ಎಸ್ ಟಿಎಫ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಪಂಜಾಬ್ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಉನ್ನತ ಹುದ್ದೆಯಲ್ಲಿದ್ದರೂ ಬೇಸಾಯದಲ್ಲಿ ಸಕ್ರಿಯ: K.M.ನಟರಾಜ್ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ
ಪಂಜಾಬ್ ಮೂಲದ ಇಬ್ಬರು ಅಪಾಯಕಾರಿ ಕ್ರಿಮಿನಲ್ಸ್ ಗಳು ಕೋಲ್ಕತಾ ನ್ಯೂಟೌನ್ ನ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ಬಳಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಎಸ್ ಟಿಎಫ್ ತಂಡ ದಾಳಿ ನಡೆಸಿತ್ತು. ಈ ವೇಳೆ ನಡೆದ ಶೂಟೌಟ್ ನಲ್ಲಿ ಇಬ್ಬರು ಕ್ರಿಮಿನಲ್ಸ್ ಗಳನ್ನು ಹೊಡೆದುರುಳಿಸಿರುವುದಾಗಿ ವರದಿ ವಿವರಿಸಿದೆ.
ವರದಿಗಳ ಪ್ರಕಾರ, ಜಾರ್ಗಾಂವ್ ನ ಇಬ್ಬರು ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹತ್ಯೆಗೆ ಸಂಬಂಧಿಸಿದ ವಾಂಟೆಡ್ ಕ್ರಿಮಿನಲ್ ಜೈಪಾಲ್ ಸಿಂಗ್ ಭುಲ್ಲರ್ ಸೇರಿದಂತೆ ಇಬ್ಬರು ಎಸ್ ಟಿಎಫ್ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಭುಲ್ಲರ್ ಪಂಜಾಬ್, ರಾಜಸ್ಥಾನ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕೊಲೆ, ದರೋಡೆ, ಅಪಹರಣ ಸೇರಿದಂತೆ 40ಕ್ಕೂ ಅಧಿಕ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವುದಾಗಿ ವರದಿ ತಿಳಿಸಿದೆ.