Advertisement

ಸಾಹಿತ್ಯ ಕ್ಷೇತ್ರಕ್ಕೆ ಜೈನರ ಕೊಡುಗೆ ಅಪಾರ’

12:19 AM Jul 02, 2019 | Sriram |

ಕಾರ್ಕಳ: ಕನ್ನಡ ಸಾಹಿತ್ಯ ಲೋಕಕ್ಕೆ ಜೈನ ಧರ್ಮೀಯರ ಕೊಡುಗೆ ಅಪಾರ ಹಾಗೂ ಅನನ್ಯವಾದುದು. ಪಂಪ, ರನ್ನ, ಜನ್ನ ಪೊನ್ನರಂತಹ ಅನೇಕ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರಮುಖರು ಎಂದು ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಹೇಳಿದರು.

Advertisement

ಜೂ. 30ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾರತೀಯ ಜೈನ್‌ ಮಿಲನ್‌ ಕಾರ್ಕಳ ಇದರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೈನಧರ್ಮದ ಮೂಲಮಂತ್ರವೇ ಅಹಿಂಸೆ. ಅಹಿಂಸೆಯಿದ್ದಲ್ಲಿ ಮಾತ್ರ ಸಮಾಜ ನೆಮ್ಮದಿ ಕಾಣಬಹುದು ಎಂದು ಸಾರಿ ಹೇಳಿದ ಧರ್ಮ ಜೈನಧರ್ಮವೆಂದು ಬಾಲಕೃಷ್ಣ ಶೆಟ್ಟಿ ಅವರು ಪ್ರತಿಪಾದಿಸಿದರು.

ಕಾರ್ಕಳ ಜೈನ ಮಿಲನ್‌ನ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜೈನ್‌ ಮಿಲನ್‌ ವಲಯ 8ರ ನಿರ್ದೇಶಕ ಅಂಡಾರು ಮಹಾವೀರ ಹೆಗ್ಡೆ, ಸಾಂತ್ರಬೆಟ್ಟು ಆದಿರಾಜ ಅಜ್ರಿ, ಶಾಂತಿರಾಜ ಹೆಗ್ಡೆ ಅಜೆಕಾರು, ಎಂ. ದೇವರಾಜ ಅಧಿಕಾರಿ, ರವಿರಾಜ ಅಜ್ರಿ ಸಾಂತ್ರಬೆಟ್ಟು, ಪಾರ್ಶ್ವನಾಥ ಜೈನ್‌ ಉಪಸ್ಥಿತರಿದ್ದರು. ಸನತ್‌ ಕುಮಾರ್‌ ಜೈನ್‌ ಸ್ವಾಗತಿಸಿ, ಜ್ಯೋತಿ ಜೈನ್‌ ನಿರೂಪಿಸಿದರು. ಜಯಶ್ರೀ ಆದಿರಾಜ ಅಜ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next