Advertisement

ಶಿವಣ್ಣನಿಗೆ ತಮಿಳು ಸಿನಿ ಫ್ಯಾನ್ಸ್‌ ಫಿದಾ

12:17 PM Aug 12, 2023 | Team Udayavani |

ನಟ ಶಿವರಾಜ್‌ ಕುಮಾರ್‌ ಅವರ ಖಡಕ್‌ ಲುಕ್‌ ನೋಡಿ ತಮಿಳು ಅಭಿಮಾನಿಗಳು ಫಿದಾ ಆಗಿದ್ದಾರೆ. “ಇವರನ್ನು ಹೆಚ್ಚೆಚ್ಚು ತಮಿಳು ಸಿನಿಮಾಗಳಲ್ಲಿ ಬಳಸಿಕೊಳ್ಳಿ’ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ಇದಕ್ಕೆ ಕಾರಣವಾಗಿರುವುದು “ಜೈಲರ್‌’ ಚಿತ್ರ. ರಜನಿಕಾಂತ್‌ ನಟನೆಯ “ಜೈಲರ್‌’ ಚಿತ್ರ ಆ.10ರಂದು ತೆರೆಕಂಡಿದೆ. ಈ ಚಿತ್ರದಲ್ಲಿ ಶಿವಣ್ಣ ಕೂಡಾ ಕೆಲವು ದೃಶ್ಯಗಳಲ್ಲಿ ನಟಿಸಿದ್ದು, ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಈ ಲುಕ್‌ ನೋಡಿ ತಮಿಳು ಫ್ಯಾನ್ಸ್‌ ಕೂಡಾ ಫಿದಾ ಆಗಿದ್ದು, ಮುಂದೆ ಮತ್ತಷ್ಟು ತಮಿಳು ಸಿನಿಮಾಗಳಲ್ಲಿ ಶಿವಣ್ಣ ಅವರನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು, ಶಿವಣ್ಣ “ಜೈಲರ್‌’ ಅಲ್ಲದೇ “ಕ್ಯಾಪ್ಟನ್‌ ಮಿಲ್ಲರ್‌’ ಚಿತ್ರದಲ್ಲೂ ನಟಿಸಿದ್ದು ಆ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next