Advertisement

ಜೈಶ್‌ ಚಟುವಟಿಕೆ: ಪಾಕ್‌ಗೆ ಸಾಕ್ಷ್ಯಕೊಟ್ಟ ಕೇಂದ್ರ

12:30 AM Mar 01, 2019 | Team Udayavani |

ಪುಲ್ವಾಮಾ ದಾಳಿಯಲ್ಲಿ ಜೈಶ್‌ ಎ ಮೊಹಮ್ಮದ್‌ ಉಗ್ರರ ಪಾತ್ರದ ಬಗ್ಗೆ ಪಾಕಿಸ್ಥಾನ ಸರಕಾರಕ್ಕೆ ಭಾರತ ಸಾಕ್ಷ್ಯಗಳನ್ನು ಒದಗಿಸಿದೆ. ಈ ಬಗ್ಗೆ ಬುಧವಾರ ಪಾಕಿಸ್ಥಾನದ ರಾಯಭಾರಿಯನ್ನು ಕರೆಸಿ ದಾಖಲೆ ನೀಡಲಾಗಿದ್ದು, ಉಗ್ರ ಮಸೂದ್‌ ಅಜರ್‌ನ ತರಬೇತಿ ಕ್ಯಾಂಪ್‌ಗ್ಳ ವಿವರ ಹಾಗೂ ಜಮ್ಮು ಕಾಶ್ಮೀರಕ್ಕೆ ಉಗ್ರರನ್ನು ಒಳನುಸುಳಿಸುವ ದಾರಿಯ ವಿವರಗಳನ್ನೂ ಇದರಲ್ಲಿ ನೀಡಲಾಗಿದೆ. ಅಷ್ಟೇ ಅಲ್ಲ, ಅಮೆರಿಕ ಸೇನೆಯು ಗ್ವಾಂಟಾನಾಮೋ ಬೇ ಜೈಲಿನಲ್ಲಿ ಬಂಧಿಸಿಟ್ಟಿದ್ದ ಉಗ್ರರ ವಿವರಗಳೂ ಇದರಲ್ಲಿವೆ ಎಂದು ಹೇಳಲಾಗಿದೆ.

Advertisement

ಬಾಲಕೋಟ್‌ನಲ್ಲಿ 2004ರ ಜನವರಿಯಲ್ಲಿ ಹಫೀಜ್‌ ಕೆ ರೆಹಮಾನ್‌ ಎಂಬ ಉಗ್ರ ತರಬೇತಿ ಪಡೆದಿರುವುದನ್ನು ಅಮೆರಿಕದ ದಾಖಲೆಗಳಲ್ಲಿ ವಿವರಿಸಲಾಗಿದ್ದು, ಇದನ್ನು ಪಾಕಿಸ್ಥಾನಕ್ಕೆ ನೀಡಲಾಗಿದೆ. ಅಲ್ಲದೆ, ಬಾಲಕೋಟ್‌ನಲ್ಲಿ ಉಗ್ರರು ಇದ್ದಾರೆ ಎಂಬ ಬಗ್ಗೆ ಪಾಕಿಸ್ಥಾನದ ದಿನಪತ್ರಿಕೆಯಲ್ಲಿ ಉಲ್ಲೇಖೀಸಿದ ವರದಿಯೂ ಇದರಲ್ಲಿದೆ. ಅಷ್ಟೇ ಅಲ್ಲ, 2006ರಲ್ಲಿ ಪಾಕ್‌ ಮೂಲದ ಇಬ್ಬರು ಉಗ್ರರನ್ನು ಪಾಕಿಸ್ಥಾನದ ಕೋರ್ಟ್‌ ನಲ್ಲಿ ವಿಚಾರಣೆ ನಡೆಸಿದ ವೇಳೆ ಪಾಕಿಸ್ಥಾನದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದರು. ಇದರಲ್ಲಿ ಬಾಲಕೋಟ್‌ನಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ಮಹತ್ವದ ಮಾಹಿತಿಯಿತ್ತು.

ಬಾಲಾಕೋಟ್‌ ಉಗ್ರ 
ಕೋರ್ಸ್‌ಗಳು

– ಮೂರು ತಿಂಗಳ ಸುಧಾರಿತ ಶಸ್ತ್ರಾಸ್ತ್ರ ಬಳಕೆ ತರಬೇತಿ – ದೌರಾ ಎ ಖಾಸ್‌
– ಆರು ತಿಂಗಳ ಸುಧಾರಿತ ಶಸ್ತ್ರಾಸ್ತ್ರ ತರಬೇತಿ ದೌರಾ ಅಲ್‌ ರಾದ್‌

ಉಗ್ರರು ಒಳನುಸುಳುವ ಪ್ರಮುಖ 
ನಾಲ್ಕು ಮಾರ್ಗಗಳ ವಿವರ

1. ಬಾಲಾಕೋಟ್‌-ಕೇಲ್‌-ಸೋನ್‌ಪಿಂಡಿ-ಮುರಿ-ದುಧಿ°ಯಾಲ್‌ (ಪಾಕ್‌/ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ)- ಥಂಡಾ ಪಾನಿ ಅರಣ್ಯ – ಜುಮಾಗುಂಡ್‌ – ನಾರ್‌ – ಪುಥಾ ಖಾನ್‌ ಗಲಿ – ಮರ್ಹಮಾ ಅರಣ್ಯ – ದೋಲಿಪುರ – ಕುನಾನ್‌ ಪೋಶೊ³àರಾ – ದೀದಿಕೂಟ್‌ (ಕುಪ್ವಾರ ಜಿಲ್ಲೆ)

2. ಬಾಲಾಕೋಟ್‌-ಕೇಲ್‌-ಸೋನ್‌ಪಿಂಡಿ-ಮುರಿ-ದುಧಿ°ಯಾಲ್‌ (ಪಾಕ್‌/ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ) – ಕೈಂತವಲಿ ಅರಣ್ಯ – ಬಂಸವಲಿ ಬೀಹ್‌R – ಶಲಬತು ಅರಣ್ಯ – ಗುಗಲ್‌ ದಾರಾ – ಅವೂರಾ ಅರಣ್ಯ – ಹಲ್ಮತ್‌ಪುರ ಅರಣ್ಯ – ಗುಲ್ಗಾಂವ್‌ – ಬತರ್ಗಾಂವ್‌ – ಗುಶಿ – ಮಗಂ ಅರಣ್ಯ (ಕುಪ್ವಾರ ಜಿಲ್ಲೆ)

Advertisement

3. ಬಾಲಾಕೋಟ್‌-ಕೇಲ್‌-ಸೋನ್‌ಪಿಂಡಿ-ಮುರಿ-ದುಧಿ°ಯಾಲ್‌-ಲುಂಡಾ (ಪಾಕ್‌/ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ)- ರಂಗಸರ್‌ – ಕಲಬಂ ಅರಣ್ಯ – ರಂಗ್ಬಾಲ ನಾರ – ಝಕನಕ – ಗುರ್ದಜಿ – ಗಗಲ್‌ – ಲೋಲಾಬ್‌(ಕುಪ್ವಾರ ಜಿಲ್ಲೆ)

4. ಬಾಲಾಕೋಟ್‌-ಕೇಲ್‌(ಪಾಕ್‌/ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ) – ಥಂಡಾ ಪಾನಿ ಅರಣ್ಯ – ಮೋಲಂಗ್‌ –  ಸುಂದರಮಲಿ – ಗುಜರರ್ದೋರಿ -ಖರ್ಬನ್‌ ಬೀಹ್‌R  ವರ್ಸುನ್‌ ಕಚಮ ಅರಣ್ಯ – ಕ್ರಲೊ³àರ (ಕುಪ್ವಾರ ಜಿಲ್ಲೆ)

ಗ್ರೆನೇಡ್‌ನ‌ಲ್ಲೇ ಧರ್ಮಾಂಧರ ಆಟ
ಬೆಳಗ್ಗೆ 3 -5 : ನಮಾಜ್‌
ಬೆಳಗ್ಗೆ 5-8: ವ್ಯಾಯಾಮ
ಬೆಳಗ್ಗೆ 8 – 9: ಉಪಾಹಾರ
ಬೆಳಗ್ಗೆ 9 – 12: ಎಕೆ 47, ಗ್ರೆನೇಡ್‌ ಲಾಂಚರ್‌, ಗನ್‌, ಹ್ಯಾಂಡ್‌ ಗ್ರೆನೇಡ್‌ ಪಿಸ್ತೂಲ್‌ ಬಳಕೆ ಅಭ್ಯಾಸ
ಮಧ್ಯಾಹ್ನ 12.30 -1.30 – ಮಧ್ಯಾಹ್ನದ ಪ್ರಾರ್ಥನೆ
ಮಧ್ಯಾಹ್ನ 1.30 – 3: ಊಟ, ನಿದ್ದೆ
ಮಧ್ಯಾಹ್ನ 3 – 4.45 – ಪರಾರಿಯಾಗುವುದು, ಅಡಗಿಕೊಳ್ಳುವುದರ ಬಗ್ಗೆ ತರಬೇತಿ. ವೈರ್‌ಲೆಸ್‌ ಸೆಟ್‌ಗಳು, ಮ್ಯಾಟ್ರಿಕ್ಸ್‌ ಶೀಟ್‌ಗಳ ಬಗ್ಗೆ ತರಬೇತಿ
ಮಧ್ಯಾಹ್ನ 4.45 – 5 : ಪಠಣ
ಸಂಜೆ 5  – 6.30: ಫ‌ುಟ್‌ಬಾಲ್‌ ಹಾಗೂ ಇತರ ಆಟಗಳು
ಸಂಜೆ 6.30- 8: ಸಂಜೆಯ ಪ್ರಾರ್ಥನೆ
ರಾತ್ರಿ 8-9: ಊಟ

Advertisement

Udayavani is now on Telegram. Click here to join our channel and stay updated with the latest news.

Next