Advertisement

ಜೈ ರಿಚರ್ಡ್ಸನ್‌ ಐಪಿಎಲ್‌ನಿಂದ ಹೊರಕ್ಕೆ

08:59 PM Mar 11, 2023 | Team Udayavani |

ಸಿಡ್ನಿ: ಆಸ್ಟ್ರೇಲಿಯದ ವೇಗಿ ಜೈ ರಿಚರ್ಡ್ಸನ್‌ ಅವರು ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದು ಈ ವರ್ಷದ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ. ರಿಚರ್ಡ್ಸನ್‌ ಮಾ.31ರಿಂದ ಆರಂಭವಾಗುವ ಐಪಿಎಲ್‌ನಲ್ಲಿ ದಾಖಲೆ ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್‌ ಪರ ಆಡಬೇಕಿತ್ತು. ಗಾಯದ ಸಮಸ್ಯೆಯಿಂದಾಗಿ ಅವರು ಭಾರತ ವಿರುದ್ಧ ಮಾ.17ರಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.

Advertisement

ಮಂಡಿರಜ್ಜು ಗಾಯದ ಸಮಸ್ಯೆಗಾಗಿ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಿಗೆ ಕೆಲವು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಗಾಯದ ಸಮಸ್ಯೆ ಕ್ರಿಕೆಟ್‌ನ ದೊಡ್ಡ ಭಾಗವಾಗಿರುವುದು ಸತ್ಯ ಎಂದವರು ಪ್ರತಿಕ್ರಿಯೆ ನೀಡಿದರು. 26ರ ಹರೆಯದ ರಿಚರ್ಡ್ಸನ್‌ ಆಸ್ಟ್ರೇಲಿಯ ಪರ ಮೂರು ಟೆಸ್ಟ್‌, 15 ಏಕದಿನ ಮತ್ತು 18 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next