Advertisement

ಹಿಮಾಚಲ ಪ್ರದೇಶ ಸಿಎಂ ಆಗಿ ಜೈರಾಮ್‌ ಠಾಕೂರ್‌ ಪ್ರಮಾಣ ವಚನ

11:46 AM Dec 27, 2017 | udayavani editorial |

ಶಿಮ್ಲಾ : ಜೈರಾಮ್‌ ಠಾಕೂರ್‌ ಅವರು ಇಂದು ಬುಧವಾರ ಬೆಳಗ್ಗೆ ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಶಿಮ್ಲಾದ ರಿಜ್‌ ಮೈದಾನದಲ್ಲಿ ಏರ್ಪಡಿಸಲಾಗಿರುವ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಲವು ಕೇಂದ್ರ ಸಚಿವರು, ಉನ್ನತ ಬಿಜೆಪಿ ನಾಯಕರು ಮತ್ತು ಬಿಜೆಪಿ ಆಡಳಿತೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ.

ಠಾಕೂರ್‌ ಅವರು ಕಾಂಗ್ರೆಸ್‌ನ ಚೇತ್‌ ರಾಮ್‌ ಅವರನ್ನು ಸೋಲಿಸುವ ಮೂಲಕ ಸಿರಾಜ್‌ ಕ್ಷೇತ್ರವನ್ನು ಜಯಿಸಿದ್ದರು. 52ರ ಹರೆಯದ ಠಾಕೂರ್‌ ಅವರು ಈ ಹಿಂದೆ ರಾಜ್ಯದಲ್ಲಿದ್ದ  ಬಿಜೆಪಿ ಸಚಿವ ಸಂಪುಟದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಹಾಯಕ ಸಚಿವರಾಗಿದ್ದರು. 

ಈ ನಡುವೆ ಕೇಂದ್ರ ಸಚಿವರಾದ ನಿತಿನ್‌ಗಡ್ಕರಿ ಮತ್ತು ರಾಜನಾಥ್‌ ಸಿಂಗ್‌ ಅವರು ಶಿಮ್ಲಾ ರಿಜ್‌ ಮೈದಾನವನ್ನು ತಲುಪಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈಗಾಗಲೇ ವೇದಿಕೆಯಲ್ಲಿ ವಿರಾಜಮಾನರಾಗಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಮ್ಲಾ ತಲುಪಿದ್ದಾರೆ. ಅವರನ್ನು ಜೈರಾಮ್‌ ಠಾಕೂರ್‌ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ. 

Advertisement

ನೂತನ ಹಿಮಾಚಲ ಕ್ಯಾಬಿನೆಟ್‌ನ ಸಂಭಾವ್ಯ ಸದಸ್ಯರು : 1. ಸುರೇಶ್‌ ಭಾರದ್ವಾಜ್‌, 2. ರಾಜೀವ್‌ ಬಿಂದಾಲ್‌, 3. ರಾಜೀವ್‌ ಸೇಹಜಲ್‌, 4. ಗೋವಿಂದ ಠಾಕೂರ್‌, 5. ಮಹೀಂದರ್‌ ಸಿಂಗ್‌, 6. ಅನಿಲ್‌ ಶರ್ಮಾ, 7. ಕಿಷನ್‌ ಕಪೂರ್‌, 8. ವಿಪಿನ್‌ ಪರ್‌ಮಾರ್‌, 9. ಶರವೀಣ್‌ ಚೌಧರಿ, 10. ವೀರೇಂದ್ರ ಕುಮಾರ್‌, 11. ರಾಮ ಲಾಲ್‌ ಮಾರ್ಕಂಡೇಯ.

ಪ್ರಧಾನ ಸಂಸದೀಯ ಕಾರ್ಯದರ್ಶಿಗಳು : 1. ವಿಕ್ರಂ ಜರಿಯಾಲ್‌, 2. ರಾಜೇಂದ್ರ ಗರ್ಗ್‌, 3. ಕಮಲೇಶ್‌ ಕುಮಾರಿ, 4. ಇಂದರ್‌ ಸಿಂಗ್‌, 5. ಬಲವೀರ್‌ ವರ್ಮಾ, 6. ವಿಕ್ರಂ ಠಾಕೂರ್‌, 7. ಸ್ಪೀಕರ್‌, 8. ರಮೇಶ್‌ ಧವಳ.
ಉಪ ಸ್ಪೀಕರ್‌ : ಹಂಸರಾಜ್‌ 

Advertisement

Udayavani is now on Telegram. Click here to join our channel and stay updated with the latest news.

Next