Advertisement
ಹೌದು, ಬರುವ ಮಾರ್ಚ್ 9ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಜಾಗ್ವಾರ್ ಐ ಪೇಸ್. ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ನ ಪ್ರಾಥಮಿಕ ಮಾಡೆಲ್ ಜನವರಿಯಲ್ಲಿ ಭಾರತಕ್ಕೆ ಬಿಡುಗಡೆಗೊಂಡಿತ್ತು. ಮಾತ್ರವಲ್ಲದೇ, ದೇಶದ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಐ ಪೇಸ್.
Related Articles
Advertisement
ಲ್ಯಾಂಡ್ ರೋವರ್ ಡಿಫೆಂಡರ್ ನ ಡಿಜಿಟಲ್ ಲಾಂಚ್ ಬಳಿಕ ನಮಗೆ ಬಂದ ಪ್ರತಿಕ್ರಿಯೆಯನ್ನು ನೋಡಿದರೇ, ಮತ್ತೊಂದು ಜಾಗ್ವಾರ್ ಐ ಪೇಸನ್ನು ಡಿಜಿಟಲ್ ಲಾಂಚ್ ಮಾಡಲು ಉತ್ಸುಕರಾಗಿದ್ದೇವೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ನ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಹೇಳಿದ್ದಾರೆ. ಈ EV ಕಾರುಗಳನ್ನು ಪರಿಸರವನ್ನು ಸಮತೋಲನದಲ್ಲಿಡುವ ದೃಷ್ಟಿಯಿಂದ ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು, ಜಾಗ್ವಾರ್ ಐ ಪೇಸ್ ಮುಂಭಾಗ ಹಾಗೂ ಹಿಂಭಾಗದ ಆ್ಯಕ್ಸಲ್ ನಲ್ಲಿ ಎರಡು ಸಿಂಕ್ರೋನಸ್ ಪರ್ಮನೆಂಟ್ ಮಾಗ್ನೆಟ್ ಎಲೆಕ್ಟರಿಕ್ ಮೋಟಾರುಗಳಿಂದ ನಿಯಂತ್ರಿಸಲ್ಪಡುತ್ತದೆ. ಇದು 394 ಬಿ ಎಚ್ ಪಿ ಹಾಗೂ 696 ಎನ್ ಎಂ ಪೀಕ್ ಟಾರ್ಕ್ ನ್ನು ಉತ್ಪಾದಿಸುತ್ತದೆ. ಎಸ್ ಯು ವಿ ಕೇವಲ 4.8 ಸೆಕೆಂಡುಗಳಲ್ಲಿ 0 ಯಿಂದ 100 ಕಿ. ಮೀ ವೇಗವನ್ನು ಪಡೆಯುತ್ತದೆ.
ಓದಿ : ಪಿಕಪ್- ದ್ವಿಚಕ್ರ ವಾಹನ ಅಪಘಾತ: ಸಿಂಧೂ ಸಾಫ್ಟ್ ಡ್ರಿಂಕ್ಸ್ ನ ಮಾಲಕರ ಪುತ್ರ ಮೃತ್ಯು
“ಜಾಗ್ವಾರ್” ಔಟರ್ ಲುಕ್ ಗೆ ಮತ್ತು ಅದರ ಕಾರ್ಯಕ್ಷಮತೆಗೆ ಹೆಸರುವಾಸಿ. ಜಾಗ್ವಾರ್ ಐ ಫೇಸ್ ಆಕರ್ಷಕವಾದ ಸ್ಲೋಪಿಂಗ್ ಬಾನೆಟ್, ಶಾರ್ಪ್ ಎಲ್ ಇ ಡಿ ಹೆಡ್ ಲ್ಯಾಂಪ್, ಮ್ಯಾಸಿವ್ ಗ್ರಿಲ್ ಹೊಂದಿರುವುದರಿಂದ ವಿಶೇಷವಾಗಿ ಕಾಣಿಸುತ್ತದೆ.
ಇನ್ನು. ಆಂತರಿಕ ನೋಟವನ್ನು ಗಮನಿಸುವುದಾದರೇ, ಅತ್ಯಾಕರ್ಷಕ ಕ್ಯಾಬಿನ್ ನೊಂದಿಗೆ ಎಲೆಕ್ಟ್ರಿಕ್ ಅಡ್ಜಸ್ಟೇಬಲ್ ಲಕ್ಸ್ಟೆಕ್ ಸ್ಪೋರ್ಟ್ಸ್ ಸೀಟುಗಳನ್ನು ಹೊಂದಿದೆ. ಮಾತ್ರವಲ್ಲದೇ, 380 ವ್ಯಾಟ್ ಮೆರ್ಡಿಯನ್ ಸೌಂಡ್ ಸಿಸ್ಟಂ, ಇಂಟರ್ಯಾಕ್ಟಿವ್ ಡ್ರೈವರ್ ಡಿಸ್ ಪ್ಲೇ, 3D ಸರೌಂಡ್ ಕ್ಯಾಮೆರಾ, ಆ್ಯನಿಮೇಟೆಡ್ ಡೈರೆಕ್ಶನಲ್ ಇಂಡಿಕೇಟರ್ಸ್, ಎಚ್ ಯು ಡಿ ( ಹೆಡ್ ಯುಪಿ ಡಿಸ್ ಪ್ಲೇ) ಯನ್ನು ಒಳಗೊಂಡು ಅತ್ಯಾಕರ್ಷಕ ಸೌಲಭ್ಯವನ್ನು ಹೊಂದಿದೆ.
ಕಾರ್ ಶೋ ರೂಮ್ ವ್ಯಾಲ್ಯೂ ಎಕ್ಸ್ ಪರ್ಟೀಸ್ ಪ್ರಕಾರ , ಜಾಗ್ವಾರ್ ಐ ಪೇಸ್ ಕಾರಿನ ಬೆಲೆ 1 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
ಓದಿ : ವಿಧಾನಸೌಧದಲ್ಲಿ ಒಡೆಯರ್ ಭಾವಚಿತ್ರ ಅಳವಡಿಕೆಗೆ ಸ್ಪೀಕರ್ ಸಕಾರಾತ್ಮಕ ಸ್ಪಂದನೆ: ಸೋಮಶೇಖರ್