Advertisement

ಜಗ್ಗೇಶ್ ಜತೆ ವಿಜಯ ಪ್ರಸಾದ ಬಿಗ್ ಬಜೆಟ್ ‘ತೋತಾಪುರಿ’

02:52 PM Sep 02, 2022 | Team Udayavani |

ನವರಸ ನಾಯಕ ಜಗ್ಗೇಶ್‌ ಹಾಗೂ ನಿರ್ದೇಶಕ ವಿಜಯಪ್ರಸಾದ್‌ ಜೋಡಿಯ “ತೋತಾಪುರಿ’ ಸೆಪ್ಟೆಂಬರ್‌ 30ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇದೇ ಜೋಡಿ ಈ ಹಿಂದೆ “ನೀರ್‌ ದೋಸೆ’ ಮೂಲಕ ಗಮನ ಸೆಳೆದಿತ್ತು. ಇದೀಗ “ತೋತಾಪುರಿ’ ಮೂಲಕ ಕಮಾಲ್‌ ಮಾಡಲು ಮುಂದಾಗಿದೆ.

Advertisement

ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ.

ಹಾಗೆಯೇ, ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ.

ಇದೇ ಜೋಡಿ ಮಾಡಿದ “ನೀರ್‌ ದೋಸೆ’ ಚಿತ್ರ ಮಹಿಳೆಯರು ಹಾಗೂ ಕುಟುಂಬ ವರ್ಗ ವೀಕ್ಷಿಸಿ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ.  ಇನ್ನು “ನೀರ್‌ದೋಸೆ’ ಹಾಗೂ “ತೋತಾಪುರಿ’ ಇವರಿಬ್ಬರ ಕಾಂಬಿನೇಷನ್‌ ಎಂಬುದು ಒಂದೆಡೆ ಯಾದರೆ, “ನೀರ್‌ದೋಸೆ’ ರಿಲೀಸ್‌ ಆಗಿದ್ದು ದಸರಾ ವೇಳೆಯಲ್ಲಿ. ಈಗ “ತೋತಾಪುರಿ’ ಸಹ ದಸರಾ ವೇಳೆಗೆ ಕಂಗೊಳಿಸಲು ಸಜ್ಜಾಗಿದೆ.

ಇದನ್ನೂ ಓದಿ:ಫೇಸ್‌ಬುಕ್‌ ಯುವತಿಯ ಮಾತಿನ ಮೋಡಿಗೆ ಮರುಳಾದ ಯುವಕ: 1.8 ಲಕ್ಷ ರೂ ಕಳೆದುಕೊಂಡ

Advertisement

“ಎರಡನೇ ಮದುವೆ’, “ಗೋವಿಂದಾಯ ನಮಃ’, “ಶ್ರಾವಣಿ ಸುಬ್ರಮಣ್ಯ’, “ಆರ್‌ಎಕ್ಸ್‌ ಸೂರಿ’, “ಶಿವಲಿಂಗ’, “ರಾಜು ಕನ್ನಡ ಮೀಡಿಯಂ’ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್‌, “ತೋತಾಪುರಿ’ ಸಿನಿಮಾವನ್ನು “ಮೋನಿಫಿಕ್ಸ್‌ ಸ್ಟುಡಿಯೋಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಿರುವ ಚಿತ್ರದ ಹಾಡಿಗೆ ಈಗಾಗಲೇ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದಾಗಲೇ 200 ಮಿಲಿಯನ್‌ ಹಿಟ್ಸ್ ದಾಖಲಿಸಿದ ಖುಷಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next