Advertisement

ಜ.24ರಂದು ಜಗ್ಗೇಶ್ ನಟನೆಯ ತೋತಾಪುರಿ ಆಡಿಯೋ ಟೀಸರ್‌

02:27 PM Jan 21, 2022 | Team Udayavani |

“ತೋತಾಪುರಿ’- ಸದ್ಯ ಕನ್ನಡ ಚಿತ್ರರಂಗ ದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಜಗ್ಗೇಶ್‌ ನಾಯಕರಾಗಿರುವ ಈ ಸಿನಿಮಾವನ್ನು ವಿಜಯ ಪ್ರಸಾದ್‌ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಜೋಡಿ “ನೀರ್‌ದೋಸೆ’ ಚಿತ್ರ ಹಿಟ್‌ ಆಗಿರುವ ಮೂಲಕ “ತೋತಾಪುರಿ’ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಕೋವಿಡ್‌ ಕಡಿಮೆಯಾಗಿ ಚಿತ್ರರಂಗ ಸಹಜ ಸ್ಥಿತಿಗೆ ಬಂದ ಕೂಡಲೇ “ತೋತಾಪುರಿ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸುತ್ತಿದ್ದಾರೆ. ಮೊದಲ ಹಂತವಾಗಿ ಜ.24ರಂದು ಚಿತ್ರದ ಆಡಿಯೋ ಟೀಸರ್‌ ಬಿಡುಗಡೆ ಮಾಡಲಿದೆ ಚಿತ್ರತಂಡ.

Advertisement

ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಇದು ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.

ಇದನ್ನೂ ಓದಿ:ರೈಡ್ ನಲ್ಲಿ ತಾನು ಔಟಾದರೂ ಬೆಂಗಾಲ್ ತಂಡಕ್ಕೆ ಎಂಟು ಅಂಕ ತಂದ ನಬಿಬಕ್ಷ್! ವಿಡಿಯೋ ನೋಡಿ

ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಕೆ.ಎ.ಸುರೇಶ್‌ ಈ ಬಾರಿಯೂ ತಮ್ಮ “ಮೋನಿಪ್ಲಿಕ್ಸ್‌ ಸ್ಟುಡಿಯೋಸ್‌’ ಬ್ಯಾನರ್‌ನಡಿ ತೋತಾಪುರಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ತಾರಾಗಣ ಹಾಗೂ ಮೇಕಿಂಗ್‌ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಚಿತ್ರದಲ್ಲಿ ಜಗ್ಗೇಶ್‌, ಡಾಲಿ ಧನಂಜಯ್‌, ದತ್ತಣ್ಣ, ಸುಮನ್‌ ರಂಗನಾಥ್‌, ಅದಿತಿ ಪ್ರಭುದೇವ, ವೀಣಾ ಸುಂದರ್‌, ಹೇಮಾದತ್‌ ಸೇರಿದಂತೆ ಚಿತ್ರದ ತಾರಾಬಳಗದಲ್ಲಿ ಸುಮಾರು 80ಕ್ಕೂ ಅಧಿಕ ಪ್ರಖ್ಯಾತ ಕಲಾವಿದರಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ವಿಜಯಪ್ರಸಾದ್‌ ವಹಿಸಿಕೊಂಡಿದ್ದಾರೆ. ಸಂಗೀತಕ್ಕೆ ರಾಗನಿಧಿ ಅನೂಪ್‌ ಸೀಳಿನ್‌, ಕ್ಯಾಮೆರಾ ಹಿಂದೆ ನಿರಂಜನ್‌ ಬಾಬು ಇದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next