Advertisement

ತಾತನಾದ ಖುಷಿಯಲ್ಲಿ ಜಗ್ಗೇಶ್

05:04 PM Dec 17, 2018 | |

ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಈಗ ಮತ್ತೊಮ್ಮೆ ತಾತನಾಗಿದ್ದಾರೆ. ಈ ಕುರಿತು ತಮ್ಮ ಟ್ವೀಟರ್​​ ಖಾತೆಯಲ್ಲಿ ಮೊಮ್ಮಗಳ ಜೊತೆಗಿನ ಫೋಟೋ ಹಾಕಿಕೊಂಡು ಸಂತೋಷವನ್ನು ಹಂಚಿಕೊಂಡಿದ್ದಾರೆ.

Advertisement

ಹೌದು, ಜಗ್ಗೇಶ್ ತಮ್ಮ ಟ್ವೀಟರ್​​ನಲ್ಲಿ “ನನ್ನ ತಮ್ಮ ರಾಮಚಂದ್ರನ ಮಗನಿಗೆ ಹೆಣ್ಣುಕಂದ ಹುಟ್ಟಿತು.. ನಾನು ಆಸೆಪಟ್ಟ ಹೆಣ್ಣುಮಗು ತಮ್ಮನ ಮಗನಿಂದ ಲಭ್ಯವಾಯಿತು.. ನಾನು 3ನೇ ಮೊಮ್ಮಗುವಿಗೆ ತಾತನಾದೆ..’ ಎಂದು ಬರೆದುಕೊಂಡಿದ್ದಾರೆ.

ಇನ್ನು ಮುಖ್ಯವಾಗಿ ಜಗ್ಗೇಶ್ ಈ ಹಿಂದೆ ಖಾಸಗಿ ವಾಹಿನಿಯಲ್ಲಿ ನನಗೆ ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಯಾವಾಗಲೂ ನನಗೆ ಕಾಡುತ್ತಿರುತ್ತದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ದಂಪತಿಗೆ ಗಂಡು ಮಗು ಜನಿಸಿತ್ತು. ಮೊಮ್ಮಗನ ಆಗಮನದಿಂದ ಸಂತಸದಿಂದ ಇದ್ದ ಜಗ್ಗೇಶ್ ಇದೀಗ ಮತ್ತೊಮ್ಮೆ ​ತಾತನಾಗಿದ್ದಾರೆ​.

Advertisement

Udayavani is now on Telegram. Click here to join our channel and stay updated with the latest news.

Next