Advertisement

ಜಗ್ಗೇಶ್ ಮೊಗದಲ್ಲಿ ‘ತೋತಾಪುರಿ’ಸಿಹಿ

12:20 PM Oct 07, 2022 | Team Udayavani |

ನವರಸ ನಾಯಕ ಜಗ್ಗೇಶ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ “ತೋತಾಪುರಿ’. ಹೌದು, ಜಗ್ಗೇಶ್‌ ನಟಿಸಿರುವ “ತೋತಾಪುರಿ’ ಚಿತ್ರ ಕಳೆದ ವಾರ ತೆರೆಕಂಡಿತ್ತು. ಈಗ ಸಿನಿಮಾವನ್ನು ಜನ ಇಷ್ಟಪಡುವ ಮೂಲಕ ಜಗ್ಗೇಶ್‌ ಖುಷಿಯಾಗಿದ್ದಾರೆ.

Advertisement

ಚಿತ್ರದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಜಾತಿ-ಧರ್ಮ ಸಂಘರ್ಷ, ಮೇಲು-ಕೀಳು ಭಾವದ ಕುರಿತಾದ ಹಲವು ಅಂಶಗಳನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ಪ್ರೇಕ್ಷಕ ಇದನ್ನು ಇಷ್ಟಪಟ್ಟಿದ್ದಾನೆ. ಈ ಮೂಲಕ “ತೋತಾಪುರಿ’ ಕೇವಲ ಒಂದು ಕಾಮಿಡಿ ಸಿನಿಮಾವಾಗದೇ ಸಾಮರಸ್ಯದ ಕುರಿತು ಹೇಳುವ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂಬುದು ಚಿತ್ರತಂಡದ ಮಾತು.

ನಾಯಕಿ ಅದಿತಿ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. ಶಕೀಲಾ ಭಾನು ಎಂಬ ಪಾತ್ರದಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬರುವ ಕೆಲವು ಸನ್ನಿವೇಶ ಗಳು, ಡೈಲಾಗ್‌ಗಳು ಇವತ್ತಿನ ಕಾಲಘಟ್ಟಕ್ಕೆ ಹಿಡಿದ ಕನ್ನಡಿ ಎಂಬುದು ಚಿತ್ರತಂಡದ ಮಾತು.

ಇದನ್ನೂ ಓದಿ:ಸಿದ್ದರಾಮಯ್ಯ ಅವಧಿಯ ಸೋಲಾರ್ ಹಗರಣದ ತನಿಖೆಗೆ ಮುಂದಾದ ಬಿಜೆಪಿ ಸರ್ಕಾರ

“ತೋತಾಪುರಿ’ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ “ತೋತಾಪುರಿ’ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ

Advertisement

ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ವಿಜಯ ಪ್ರಸಾದ್‌ ನಿರ್ದೇಶಿಸಿದ್ದು, ಕೆ.ಎ.ಸುರೇಶ್‌ ನಿರ್ಮಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next