Advertisement

1997ರ ಬಳಿಕ ಅತ್ಯಧಿಕ ಅಂತರದಿಂದ ಗೆದ್ದ ಜಗದೀಪ್‌ ಧನ್ಕರ್‌

06:52 PM Aug 07, 2022 | Team Udayavani |

ನವದೆಹಲಿ: ದೇಶದ 14ನೇ ಉಪರಾಷ್ಟ್ರಪತಿಯಾಗಿ ಶನಿವಾರ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನ್ಕರ್‌ ಅವರು, ಭಾರೀ ಸಂಖ್ಯೆಯ ಮತಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

Advertisement

ಧನ್ಕರ್‌ 528 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮಾರ್ಗರೇಟ್‌ ಆಳ್ವಾ 182 ಮತಗಳನ್ನು ಗಳಿಸಿದ್ದಾರೆ. ಒಟ್ಟಾರೆ 725 ಮಾನ್ಯ ಮತಗಳ ಪೈಕಿ ಶೇ.72.8ರಷ್ಟು ಮತಗಳು ಧನ್ಕರ್‌ರಿಗೆ ಬಿದ್ದಿವೆ. ಅವರ ಗೆಲುವಿನ ಅಂತರವು 1997ರ ಬಳಿಕ ಅತಿ ಹೆಚ್ಚು ಎಂಬ ದಾಖಲೆ ಬರೆದಿದೆ.

ಜತೆಗೆ, 2017ರಲ್ಲಿ ವೆಂಕಯ್ಯ¬ ನಾಯ್ಡು ಅವರು ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರೋ, ಅದಕ್ಕಿಂತ ಶೇ.2ರಷ್ಟು ಹೆಚ್ಚು ಮತಗಳ ಅಂತರದಿಂದ ಧನ್ಕರ್‌ ಗೆದ್ದಿದ್ದಾರೆ. ಇನ್ನು, ಅತ್ಯಧಿಕ ಮತಗಳ ಅಂತರದಿಂದ ಗೆದ್ದವರು ಎಂಬ ದಾಖಲೆ ಈಗಲೂ ಕೆ.ಆರ್‌. ನಾರಾಯಣನ್‌ ಅವರ ಹೆಸರಲ್ಲಿದೆ. ಅವರು 1992ರ ಚುನಾವಣೆಯಲ್ಲಿ 701 ಮತಗಳ ಪೈಕಿ 700 ಮತಗಳನ್ನು ಪಡೆದಿದ್ದರು.

ಜಗದೀಪ್‌ ಧನ್ಕರ್‌ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಪ್ರಮಾಣ ಪತ್ರವನ್ನು ಭಾನುವಾರ ಚುನಾವಣಾ ಆಯೋಗವು ವಿತರಿಸಿದೆ. ಆ.10ರಂದು ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಧನ್ಕರ್‌ ಅವರು 14ನೇ ಉಪರಾಷ್ಟ್ರಪತಿಯಾಗಿ ಆ.11ರಂದು ಪ್ರಮಾಣ ಸ್ವೀಕರಿಸಲಿದ್ದಾರೆ. ಭೈರೋನ್‌ ಸಿಂಗ್‌ ಶೇಖಾವತ್‌ ಬಳಿಕ ಆಯ್ಕೆಯಾದ ರಾಜಸ್ಥಾನ ಮೂಲದ ಎರಡನೇ ಉಪರಾಷ್ಟ್ರಪತಿ ಎಂಬ ಹೆಗ್ಗಳಿಕೆಯನ್ನೂ ಇವರು ಪಡೆದಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next