ಅಮರಾವತಿ(ಹೈದರಾಬಾದ್): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪಕ್ಷದ ಕಾರ್ಯಕರ್ತರು ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಈ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ರೆಡ್ಡಿಯನ್ನು ವಾರಂಗಲ್ ನಲ್ಲಿ ಬಂಧಿಸಿರುವ ಘಟನೆ ನಡೆದಿರುವುದಾಗಿ ಟಿವಿ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ನಿವಾಸಕ್ಕೆ ಎಸ್ ಸಿ, ಎಸ್ ಟಿ ಸಮಾಜದ ಮಠಾಧೀಶರು: ಗೌಪ್ಯ ಸಭೆ
ವೈಎಸ್ ಆರ್ ಟಿಪಿಯ ಪ್ರಚಾರ ಕಾರ್ಯದಲ್ಲಿ ತೊಡಗಿದ ಬಸ್ ಗೆ ಕೆಸಿಆರ್ ಪಕ್ಷದ ಕಾರ್ಯಕರ್ತರು ಬೆಂಕಿ ಹಚ್ಚಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಘರ್ಷಣೆ ನಡೆದಿರುವುದಾಗಿ ವರದಿ ವಿವರಿಸಿದೆ.
ಕೆಲವು ಬಸ್ ಮತ್ತು ವಾಹನಗಳಿಗೆ ತೆಲಂಗಾಣ ರಾಷ್ಟ್ರ ಸಮಿತಿಯ ಭಾರತ್ ರಾಷ್ಟ್ರ ಸಮಿತಿಯ ಕಾರ್ಯಕರ್ತರು ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿದೆ. ನೆರೆಯ ತೆಲಂಗಾಣದಲ್ಲಿ ವೈಎಸ್ ಆರ್ ತೆಲಂಗಾಣ ಪಕ್ಷ ನೆಲೆಯೂರುವಂತೆ ಮಾಡಲು ಶರ್ಮಿಳಾ ಪ್ರಯತ್ನಿಸುತ್ತಿರುವುದಾಗಿ ವಿಶ್ಲೇಷಿಸಲಾಗಿದೆ.
Related Articles
ಕೆಲವು ವ್ಯಕ್ತಿಗಳು ವೈಎಸ್ ಆರ್ ಪಿ ಬಸ್ ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನರಸಮ್ ಪೇಟ್ ಎಸಿಪಿ ಆರ್ ವಿ ಫಣೀಂದರ್ ಎಎನ್ ಐಗೆ ತಿಳಿಸಿದ್ದಾರೆ.