ಹುಬ್ಬಳ್ಳಿ: ರಾಜಕೀಯದಲ್ಲಿದ್ದು, ಎಂದೂ ಕೂಡಾ ರಸ್ತೆಗೆ ಇಳಿಯದವರು ಇಂದು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದು. ಇದರಿಂದಲೇ ಗೊತ್ತಾಗುತ್ತದೆ. ಅವರೆಷ್ಟು ಭಯಗೊಂಡಿದ್ದಾರೆ ಎನ್ನುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕೂಡಾ ಪಾದಯಾತ್ರೆ ಮಾಡದವರು, ಸಾರ್ವಜನಿಕವಾಗಿ ಭೇಟಿ ಮಾಡದವರು, ತಮ್ಮ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಬಂದರೂ ಸಹ ಕಾಯುವಂತಹ ಸ್ಥಿತಿ ನಿರ್ಮಾಣ ಮಾಡಿದ್ದ ಪಕ್ಷ ಇಂದು ಇಡೀ ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರೆ ಎಲ್ಲರೂ ತಿಳಿದುಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಅವನತಿ ಆರಂಭಗೊಂಡಿದೆ ಎಂದು. ಈಗಾಗಲೇ ಅವರು ಸಂಚರಿಸಿರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ ಎಂದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ‘ಹಿಂದೂ’ ವಿವಾದ : ಖಂಡಿಸಿದ ಸುರ್ಜೇವಾಲಾ
ಇದೀಗ ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು, ಬೆಂಗಳೂರಲ್ಲಿ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೆ ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಶಕ್ತಿಗಳಿದ್ದು, ಇದೀಗ ಮೂರನೇ ಶಕ್ತಿ ಬಂದಿದೆ. ಮೊದಲೇ ಒಡೆದು ಹೋಳಾಗಿದ್ದ ಪಕ್ಷ ಇದೀಗ ಮೂರು ಮುಖಗಳಾಗಲಿವೆ ಎಂದರು.
Related Articles
ಸಮಾವೇಶದಲ್ಲಿಯೇ ಒಗ್ಗಟ್ಟು ಪ್ರದರ್ಶನ ಮಾಡುವಂತೆ ರಾಷ್ಟ್ರಾಧ್ಯಕ್ಷರು ಸೂಚನೆ ನೀಡುತ್ತಾರೆ ಎಂದರೆ ಅದರ ಮೂಲಕವೇ ತಿಳಿದುಕೊಳ್ಳಬೇಕು. ಒಗ್ಗಟ್ಟಿನ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಭಯಭೀತಗೊಂಡು ಹಲವು ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ ಎಂದರು.
ಪಾಲಿಕೆ ಆಯುಕ್ತರು ನಿರ್ಧರಿಸುತ್ತಾರೆ:
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ಪಾಲಿಕೆಯ ಆಸ್ತಿಯಾಗಿದ್ದು, ಪಾಲಿಕೆ ಆಯುಕ್ತರು ಅದರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಲ್ಲಿ ನಮ್ಮ ಹಸ್ತಕ್ಷೇಪವಾಗಲಿ, ನಮ್ಮ ನಿರ್ಧಾರವಾಗಲಿ ಬರುವುದಿಲ್ಲ ಎಂದು ಜಗದೀಶ ಶೆಟ್ಟರ ಹೇಳಿದರು.