Advertisement

ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ, ಹೇಳಿಕೆಗಳಿಗೆ ಇತಿಮಿತಿ ಇರಬೇಕು: ಜಗದೀಶ್‌ ಶೆಟ್ಟರ್

01:01 PM Jan 26, 2023 | Team Udayavani |

ಹುಬ್ಬಳ್ಳಿ: ನನ್ನ ರಾಜಕೀಯ ಜೀವನದಲ್ಲೇ ಪ್ರಸ್ತುತ ದ ಕೀಳುಮಟ್ಟದ ಹೇಳಿಕೆಗಳನ್ನು ಕೇಳಿಲ್ಲ. ರಾಜಕೀಯದಲ್ಲಿ ಹೇಳಿಕೆಗಳಿಗೂ ಒಂದು ಮಿತಿ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯ ಪಟ್ಟರು.

Advertisement

ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ದೇಶಪಾಂಡೆ ನಗರದಲ್ಲಿರುವ  ಬಿಜೆಪಿ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.

ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ, ಹೇಳಿಕೆಗಳಿಗೆ ಇತಿಮಿತಿ ಇರಬೇಕು. ಕೀಳುಮಟ್ಟದ ಹೇಳಿಕೆಗಳಿಗೆ ಯಾರು ಮುಂದಾಗಬಾರದು.  ಚುನಾವಣೆ ದೃಷ್ಟಿಕೋನದೊಂದಿಗೆ ಕಾಂಗ್ರೆಸ್ ಕೀಳುಮಟ್ಟದ ಹೇಳಿಕೆಗಳನ್ನು ಆರಂಭಿಸಿತು.ಬಹುತೇಕ ರಾಜ್ಯಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ರಾಜ್ಯದಲ್ಲಿಯೂ ಸೋಲಿನ ಭೀತಿಯಿಂದ ಹತಾಶೆಗೊಂಡು ಇಂತಹ ಕೀಳುಮಟ್ಟದ ಹೇಳಿಕೆಗಳಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿಟಿ ರವಿ

ಕಾಂಗ್ರೆಸ್ ನ ಹೇಳಿಕೆಗಳಿಗೆ ನಮ್ಮವರು ಪ್ರತಿಕ್ರಿಯೆ ನೀಡಬೇಕಾಗಿದೆ ಇಲ್ಲವಾದರೆ, ಕಾಂಗ್ರೆಸ್ ಒಂದು ಸುಳ್ಳನ್ನು ನೂರು ಬಾಎಇ ಹೇಳಿ, ಅದನ್ನೇ ಸತ್ಯವಾಗಿಸಲು ಮುಂದಾಗಲಿದೆ.  ಪಕ್ಷದ ಕೆಲವರು ನೀಡಿದ ಕೀಳುಮಟ್ಟದ ಹೇಳಿಕೆಗಳನ್ನು ನಾನು ಒಪ್ಪುವುದಿಲ್ಲ. ಈ ಬಗ್ಗೆ ಅವಕಾಶ ಸಿಕ್ಕರೆ ಪಕ್ಷ ವೇದಿಕೆಯಲ್ಲಿ ಇದನ್ನು ಪ್ರಸ್ತಾಪಿಸುವುದಾಗಿ ಶೆಟ್ಟರ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next