Advertisement

ಹಿಂಜಾವೇ ಕಾರಂತ್ ಬಂಧನ;ಉದ್ವಿಗ್ನ ಸ್ಥಿತಿ;ತಡರಾತ್ರಿಯೇ ಜಾಮೀನು !

08:34 AM Sep 30, 2017 | |

ಪುತ್ತೂರು: ಪಿಎಸ್ಐ ಅಬ್ದುಲ್ ಖಾದರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಅವರನ್ನು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಬಂಧಿಸಿ,ತಡರಾತ್ರಿ ಜಾಮೀನು ಸಿಕ್ಕಿದ ಕೂಡಲೇ ಬಿಡುಗಡೆ ಮಾಡಲಾಗಿದೆ . 

Advertisement

ಬಂಧನದ ಸುದ್ದಿ  ಹೊರಬೀಳುತ್ತಿದ್ದಂತೆ ಪುತ್ತೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು . ಕೆಲವೆಡೆ ಕಲ್ಲು ತೂರಾಟ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. 

ರಾತ್ರಿ ಪುತ್ತೂರು ಠಾಣೆಗೆ ಕರೆತಂದು, ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಕರೆದೊಯ್ದು, ಹಾಜರು ಪಡಿಸಲಾಯಿತು. ಕಾರಂತ್ ಪರ ವಕೀಲರ ಜಾಮೀನು ಅರ್ಜಿ ಮಾನ್ಯ ಮಾಡಿ ರಾತ್ರಿ 1.30 ರ  ವೇಳೆಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು.ಇದರಿಂದಾಗಿ ಉದ್ವಿಗ್ನ ಸ್ಥಿತಿ ತಿಳಿಯಾಯಿತು. 

ಬಂಧನವಾದ ಕೂಡಲೇ ಆಕ್ರೋಶ ಗೊಂಡಿದ್ದ ಹಿಂದೂ ಪರ ಸಂಘಟನೆಗಳು ಶನಿವಾರ ಪುತ್ತೂರು ಬಂದ್ ಗೆ ಕರೆ ನೀಡಿದ್ದರು. ನೂರಾರು ಕಾರ್ಯಕರ್ತರು ಠಾಣೆಯ ಮುಂದೆ ಜಮಾವಣೆ ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next