ರಬಕವಿ-ಬನಹಟ್ಟಿ: ಸಮಾಜದಲ್ಲಿ ಸಂಸ್ಕಾರವನ್ನುಂಟು ಮಾಡುವಲ್ಲಿ ಮಠಗಳ ಪಾತ್ರ ಬಹಳಷ್ಟು ವಿಶಿಷ್ಠವಾಗಿದೆ. ಗುರುವಿಗೆ ನಾವು ಶರಣಗಾಗಬೇಕು. ಮಾನವನನ್ನು ದೇವ ಮಾನವನನ್ನಾಗಿ ಮಾಡುವವನೆ ಗುರು. ನಮಗೆ ಸಂಸ್ಕಾರ, ಜೀವನದ ಮೌಲ್ಯಗಳನ್ನು, ಬದುಕುವ ಮಾರ್ಗ ಮತ್ತು ನಮ್ಮನ್ನು ಮಾನಸಿಕವಾಗಿ ಸಬಲರನ್ನಾಗಿ ಮಾಡುವವನೆ ಗುರು ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಜಮಖಂಡಿಯ ಜಗದೀಶ ಗುಡಗುಂಟಿಮಠ ತಿಳಿಸಿದರು.
ಅವರು ಬನಹಟ್ಟಿಯ ಹಿರೇಮಠದಲ್ಲಿ ಶಾಂತವೀರ ಶಿವಾಚಾರ್ಯರ 31ನೇ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಸನಾತನ ಧರ್ಮವಾಗಿದೆ. ಈ ಧರ್ಮ ಎಲ್ಲರಿಗೂ ಸಂಸ್ಕಾರವನ್ನು ನೀಡುವುದಾಗಿದೆ. ಇಂದಿನ ವೈಜ್ಞಾನಿಕ ದಿನಗಳಲ್ಲಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ರತಿಯೊಂದು ಹೊಸ ಸಮಸ್ಯೆ ನಮಗೆ ಹೊಸ ಪಾಠವನ್ನು ಕಲಿಸುತ್ತವೆ ಎಂದು ಗುಡಗುಂಟಿಮಠ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ದಿನನಿತ್ಯದ ಪರಿಶುದ್ಧ ವ್ಯವಹಾರವೇ ಆಧ್ಯಾತ್ಮವಾಗಿದೆ. ಭಕ್ತಿಯ ಮುಗ್ಧತೆಯೇ ಅಭಿವ್ಯಕ್ತಿಯಾಗಿದೆ. ಸತ್ಸಂಗದಿAದ ಮನಸ್ಸು ಪರಿಶುದ್ಧವಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಡುವುದು ಆಧ್ಯಾತ್ಮದ ಮೊದಲ ಉದ್ದೇಶ ಎಂದರು.
ಇದನ್ನೂ ಓದಿ : ಒಮಿಕ್ರಾನ್ ಭೀತಿ : ಗುಜರಾತ್ ನ ಎಂಟು ನಗರಗಳಲ್ಲಿ ಡಿ.31 ರ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆ
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರೇಮಠದ ಅನ್ನದಾನ ಸ್ವಾಮೀಜಿ ಪ್ರವಚನ ನೀಡಿದರು. ಹಿರೇಮಠದ ಶರಣಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ರಾಚಯ್ಯ ಅಕ್ಕಿ, ಸಂಗಮೇಶ ಮುತ್ತಿನಕಂತಿಮಠ, ಅಶೋಕ ಗಾವಿ, ಮಾನಿಂಗಯ್ಯ ಹಿಟ್ಟಿನಮಠ, ಸಿದ್ಧರಾಮಯ್ಯ ಮಠಪತಿ ಇದ್ದರು.
ಸಮಾರಂಭದಲ್ಲಿ ಬಿ.ಆರ್.ಪೊಲೀಸಪಾಟೀಲ, ಮಲ್ಲೇಶಪ್ಪ ಕುಂಚನೂರ, ಕಲ್ಲಪ್ಪ ಪತ್ತಾರ, ಬಸವರಾಜ ಭದ್ರನವರ, ಸಂಜಯ ಮುನ್ನೊಳ್ಳಿ, ರಾಮಣ್ಣ ಭದ್ರನವರ, ಶ್ರೀಶೈಲ ಧಬಾಡಿ, ಗುರು ಮಠಪತಿ, ಮಹಾದೇವ ಮುಧೋಳಮಠ, ಮಹೇಶ ಕಲಕತ್ತಿಮಠ ಸೇರಿದಂತೆ ಅನೇಕರು ಇದ್ದರು.
ಗೀತಾ ಎಸ್. ಪ್ರಾರ್ಥಿಸಿದರು. ವಿನಿತ ಹಿರೇಮಠ ಸ್ವಾಗತಿಸಿದರು. ಮಹಾದೇವ ಗುಟ್ಲಿ ನಿರೂಪಿಸಿದರು. ಶಿವಯ್ಯ ಹಿರೇಮಠ ವಂದಿಸಿದರು.