Advertisement

ರಬಕವಿ-ಬನಹಟ್ಟಿ: ಜಗದಾಳ ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

12:34 PM Jun 19, 2022 | Team Udayavani |

ರಬಕವಿ-ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮ ಪಂಚಾಯಿತಿಗೆ  ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗುರಲಿಂಗ ಚಿಂಚಲಿ ಅಧ್ಯಕ್ಷರಾಗಿ ಹಾಗು ಉಪಾಧ್ಯಕ್ಷರಾಗಿ ಲಕ್ಷ್ಮೀ ಮಲ್ಲಯ್ಯ ಕಾಡದೇವರ ಅವಿರೋಧವಾಗಿ ಆಯ್ಕೆಗೊಂಡರು.

Advertisement

ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸುರೇಶ ಅಸ್ಕಿ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಶ್ರೀಶೈಲ ಜನವಾಡ ರಾಜೀನಾಮೆ ನೀಡಿದ್ದರ ಹಿನ್ನಲೆಯಲ್ಲಿ 15-15ತಿಂಗಳ ಅವಧಿಗೆ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಜಗದಾಳ ಗ್ರಾಮ ಪಂಚಾಯಿತಿಯ 20 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ 12 ಸದಸ್ಯರಿದ್ದು, ಬಿಜೆಪಿ ಬೆಂಬಲಿತ 8 ಸದಸ್ಯರಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು  ಎರಡೂ ಸ್ಥಾನಗಳಿಗೆ ಒಂದೊಂದು ಮಾತ್ರ ನಾಮಪತ್ರ ಸಲ್ಲಿದ್ದರಿಂದ ಅವರ ಅವಿರೋಧ ಆಯ್ಕೆ ಸರಳವಾಯಿತು. ಇದರಿಂದ ಜಗದಾಳ ಪಂಚಾಯತಿ ಕಾಂಗ್ರೆಸ್ ಬದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು.

ಈ ಸಂದರ್ಭದಲ್ಲಿ ಸುರೇಶ ಅಸ್ಕಿ, ಮಾರುತಿ, ಸೊರಗಾಂವಿ, ಗುರಪಾದ ಅಸ್ಕಿ, ಶಕುಂತಲಾ ಸೋನಾವಣೆ, ಇಂದ್ರವ್ವ ಹಾದಿಮನಿ, ಮಲ್ಲಪ್ಪ ಹಳ್ಳೂರ, ಅಡಿವೆಪ್ಪ ಪಾಟೀಲ, ಶಂಕರ ಉಪ್ಪಾರ, ಪಂಡಿತ ಬೋಸ್ಲೆ, ಚಂದ್ರಶೇಖರ ಕುರಿ ಸೇರಿದಂತೆ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next