Advertisement
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡು ಸದನಗಳಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿ ಪಾಕಿಸ್ಥಾನ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ದೂರಿದ್ದಾರೆ. ಮಾನವೀಯತೆಯ ನೆರವಿನ ನೆಪದಲ್ಲಿ ಜಾಧವ್ ಪತ್ನಿ, ತಾಯಿ ಧರಿಸಿದ್ದ ಮಂಗಳ ಸೂತ್ರ, ಕೈಗಳಲ್ಲಿದ್ದ ಬಳೆಗಳು, ಕುಂಕುಮ ತೆಗೆಸಿ ಅವಮಾನ ಮಾಡಲಾಗಿದೆ. ಮದುವೆಯಾಗಿರುವ ಇಬ್ಬರನ್ನೂ ವಿಧವೆಯರಂತೆ ಚಿತ್ರಿಸಲಾಗಿದೆ ಎಂದು ಪಾಕಿಸ್ಥಾನ ಸರಕಾರದ ವಿರುದ್ಧ ಸ್ವರಾಜ್ ಹರಿಹಾಯ್ದರು.
Related Articles
“ನೀನೇಕೆ ಅದನ್ನೆಲ್ಲ ಹೇಳುತ್ತಿದ್ದೀಯ? ಇರಾನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ನಿನ್ನನ್ನು ಅಪಹರಿಸಲಾಗಿತ್ತು. ನೀನು ಸತ್ಯವನ್ನೇ ಹೇಳಬೇಕು’ ಹೀಗೆಂದು ಒತ್ತಾಯಿಸಿದ್ದು ಕುಲಭೂಷಣ ಜಾಧವ್ ತಾಯಿ. ಪಾಕಿಸ್ಥಾನದ ಬಿಗಿ ಭದ್ರತೆಯಲ್ಲಿಯೂ ಕೂಡ ತಾಯಿ ಅವಂತಿ ಜಾಧವ್ ಪುತ್ರನ ನಿರಂತರ ಮಾತುಗಳನ್ನು ತುಂಡರಿಸಿ ಮಾತಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪದೇ ಪದೆ ಮಧ್ಯ ಪ್ರವೇಶ ಮಾಡುತ್ತಿರುವ ಪಾಕಿಸ್ಥಾನದ ಅಧಿಕಾರಿಗಳ ನಡುವೆಯೇ ಅವರು ನೆರೆಯ ರಾಷ್ಟ್ರದ ಅಧಿಕಾರಿಗಳು ಮಾತಿಗೆ ಅಡ್ಡಿ ಮಾಡುತ್ತಿದ್ದರೂ ಲೆಕ್ಕಿಸದೆ ಮಾತಾಡಿದ್ದಾರೆ. ಈ ಮೂಲಕ ಪಾಕಿಸ್ಥಾನ ಅಧಿಕಾರಿಗಳು ಒಟ್ಟಾರೆ ಮಾತುಕತೆಯನ್ನು ರೆಕಾರ್ಡ್ ಮಾಡುವ ನಿರಂತರ ಪ್ರಯತ್ನಕ್ಕೆ ತಡೆಯೊಡ್ಡಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
Advertisement
ಚಿಪ್ ಇದೆ ಎನ್ನಲು ವಿಡಿಯೋ ದಾಖಲೆಈ ನಡುವೆ ಜಾಧವ್ ಪತ್ನಿ ಚಪ್ಪಲಿಯಲ್ಲಿ ಚಿಪ್ ಇದೆ ಎಂದು ಹೇಳಿ ನಗೆಪಾಟಲಿಗೀಡಾಗಿರುವ ಪಾಕಿಸ್ಥಾನ ಇದೀಗ ತನ್ನ ಸುಳ್ಳನ್ನು ಸಾಬೀತು ಮಾಡಲು ಅದಕ್ಕೆ ವಿಡಿಯೋ ದಾಖಲೆ ಇದೆ ಎನ್ನಲು ಮತ್ತೂಂದು ನಾಟಕ ಮಾಡಲು ಮುಂದಾಗಿದೆ. ಮೀನುಗಾರರ ಬಿಡುಗಡೆ
ಇತ್ತೀಚೆಗಷ್ಟೇ ಬಂಧಿಸಿದ್ದ ಭಾರತೀಯ 145 ಮೀನುಗಾರ ರನ್ನು ಪಾಕಿಸ್ಥಾನ ಮಾನವೀಯತೆ ದೃಷ್ಟಿ ಯಿಂದ ಬಿಡುಗಡೆ ಮಾಡಿದೆ. ಕುಲಭೂಷಣ್ ಜಾಧವ್ ವಿಚಾರವಾಗಿ ಉಭಯ ದೇಶಗಳ ಮಧ್ಯ ಅಹಿತಕರ ವಾತಾವರಣ ಏರ್ಪಟ್ಟಿರುವಾಗಲೇ ಪಾಕ್ ಇಂಥದ್ದೊಂದು ನಿರ್ಧಾರ ತೆಗೆದು ಕೊಂಡಿದೆ. ಕಳೆದವಾರ ಪಾಕ್ ವಿದೇಶಾಂಗ ವಕ್ತಾರ ಮಹಮ್ಮದ್ ಫೈಸಲ್ ಜ.8ರ ಒಳಗಾಗಿ 291 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಜ.8 ರಂದು ಉಳಿದ ಮೀನುಗಾರರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.