Advertisement

ಎಣಿಕೆ ಕೇಂದ್ರ ಪರಿಶೀಲಿಸಿದ ವೀಕ್ಷಕ ಜಾಧವ್‌

03:29 PM Dec 03, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ-2019ರ ಸಂಬಂಧ ಮತ ಎಣಿಕೆ ಕಾರ್ಯಕ್ಕೆ ಗುರುತಿಸಲಾಗಿರುವ ನಗರದ ಬಿ.ಬಿ.ರಸ್ತೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ ಮತ ಎಣಿಕೆ

Advertisement

ಕೇಂದ್ರಕ್ಕೆ ಸಜ್ಜುಗೊಳಿಸಿರುವುದನ್ನು ಸೋಮವಾರ ಉಪ ಚುನಾವಣೆ ಸಾಮಾನ್ಯ ವೀಕ್ಷಕರಾದ ಕೆ.ವಿ.ಜಾಧವ್‌ ಭೇಟಿ ನೀಡಿ ಪರಿಶೀಲಿಸಿದರು.

ಡಿ.5 ರಂದು ಮತದಾನ ಮುಗಿದಕೂಡಲೇ ಇವಿಎಂ ಮತಯಂತ್ರಗಳನ್ನು ಸಂಗ್ರಹಿಸಿ ಇಡಲಾಗುವ ಸ್ಟ್ರಾಂಗ್‌ ರೂಮ್‌ ಮತ ಎಣಿಕೆ ಕೇಂದ್ರದಲ್ಲಿಕೈಗೊಳ್ಳಲಾಗಿರುವ ವ್ಯವಸ್ಥೆಗಳನ್ನುಖುದ್ದು ವೀಕ್ಷಣೆ ಮಾಡಿದ ವೀಕ್ಷಕರು, ಜಿಲ್ಲಾಡಳಿತಕ್ಕೆ ಹಲವು ಸಲಹೆ, ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ, ಸಾಮಾನ್ಯ ವೀಕ್ಷಕರಿಗೆ ಮತ ಎಣಿಕ ಕಾರ್ಯಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಜಿಲ್ಲಾಎಸ್ಪಿ ಅಭಿನವ ಖರೆ ಸಹ ಉಪಸ್ಥಿತರಿದ್ದು, ಮತ ಎಣಿಕೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆಕೈಗೊಳ್ಳಲಾಗುತ್ತಿರುವ ಭದ್ರತಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಗೂ ಸಾಮಾನ್ಯ ವೀಕ್ಷಕರಾದ ಕೆ.ವಿ.ಜಾಧವ್‌, ಮತ ಎಣಿಕೆ ಕೇಂದ್ರವನ್ನು ಸುತ್ತಾಡಿ ಮತ ಯಂತ್ರಗಳನ್ನು ಜೋಡಿಸುವ ಕುರಿತು ಬಳಿಕ ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಭದ್ರತೆ ಸೇರಿದಂತೆ ಬೆಳಕಿನ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸುವಿಕೆ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಆರ್‌. ಲತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಎ.ಎನ್‌.ರಘು ನಂದನ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next