Advertisement

ವಿಕ್ರಾಂತ್‌ ರೋಣ ಅಡ್ಡಾಗೆ ಜಾಕ್ವೆಲಿನ್ ಫ‌ರ್ನಾಂಡೀಸ್‌ ಎಂಟ್ರಿ

10:14 AM Jul 12, 2021 | Team Udayavani |

ಕೊನೆಗೂ ಹಾಟ್‌ ಬೆಡಗಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌ ಅವರ ಆಗಮನವಾಗಿದೆ. ಅದು “ವಿಕ್ರಾಂತ್‌ ರೋಣ’ ಜೊತೆ ಸ್ಟೆಪ್‌ ಹಾಕಲು. ಹೌದು, ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಚಿತ್ರದ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಈಗ ಎಲ್ಲವೂ ಅಂತಿಮವಾಗಿದ್ದು, ಜಾಕ್ವೆಲಿನ್‌ “ವಿಕ್ರಾಂತ್‌ ರೋಣ’ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ.

Advertisement

ಏಳು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಹಾಡಿಗಾಗಿ ಸಖತ್‌ ಕಲರ್‌ಫ‌ುಲ್‌ ಸೆಟ್‌ ಹಾಕಲಾಗಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಅನೂಪ್‌ ಭಂಡಾರಿ ನಿರ್ದೇಶಿಸುತ್ತಿದ್ದು, ಜಾಕ್‌ ಮಂಜು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಇಂದು ಶಿವಣ್ಣ ನ ಬರ್ತ್ ಡೇ: 123ನೇ ಚಿತ್ರದ ಟೈಟಲ್ ಬಿಡುಗಡೆ

ಇನ್ನು, ಈಗಾಗಲೇ ನಟ ಸುದೀಪ್‌ ಡಬ್ಬಿಂಗ್‌ ಮುಗಿಸಿದ್ದು, ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಈ ಚಿತ್ರ 3ಡಿಯಲ್ಲೂ ಬರುತ್ತಿದೆ. ಸಿನಿಮಾಕ್ಕೆ ಡಬ್ಬಿಂಗ್‌ ಮಾಡಿದ ಕಲಾವಿದರೆಲ್ಲರೂ ಸಿನಿಮಾ ನೋಡಿ ಥ್ರಿಲ್‌ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟ ರವಿಶಂಕರ್‌ ಗೌಡ, “ವಿಕ್ರಾಂತ್‌ ರೋಣ’ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದರು.

ಡಬ್ಬಿಂಗ್‌ ಅನುಭವವನ್ನು ರವಿಶಂಕರ್‌ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಾದ ಬಳಿಕ ಇತ್ತೀಚೆಗೆ “ವಿಕ್ರಾಂತ್‌ ರೋಣ’ ಚಿತ್ರದ ನಾಯಕಿ ನೀತಾ ಅಶೋಕ್‌ಕೂಡ ತಮ್ಮ ಡಬ್ಬಿಂಗ್‌ಕೆಲಸವನ್ನು ಮುಗಿಸಿದ್ದು, ಅದರ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next