Advertisement

ಚೆನ್ನೈ ಪೊಲೀಸರಿಂದ Operation Birthday: 67 gangsters ಸೆರೆ

07:02 PM Feb 08, 2018 | Team Udayavani |

ಚೆನ್ನೈ : ಗ್ಯಾಂಗ್‌ ಸ್ಟರ್‌ ಓರ್ವನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿವಿಧ ಕ್ರಿಮಿನಲ್‌ ಕೇಸುಗಳಲ್ಲಿ ಪೊಲೀಸರಿಗೆ ಬಹುವಾಗಿ ಬೇಕಾಗಿದ್ದ 67 ಗ್ಯಾಂಗ್‌ಸ್ಟರ್‌ಗಳನ್ನು ಒಂದೇ ಕಡೆ ಬಂಧಿಸುವ ಅಪೂರ್ವ ಯಶಸ್ಸನ್ನು ಚೆನ್ನೈ ಪೊಲೀಸರು ಕಂಡಿದ್ದಾರೆ. 

Advertisement

ಬರ್ತ್‌ ಡೇ ಪಾರ್ಟಿಗೆಂದು ಬಂದಿದ್ದ ಈ 67 ಗ್ಯಾಂಗ್‌ಸ್ಟರ್‌ಗಳನ್ನು ಒಂದೇ ಕಡೆ ಸೆರೆ ಹಿಡಿಯುವ ಮುನ್ನ ಪೊಲೀಸರು ಇಡಿಯ ಆವರಣವನ್ನು ಸಂಪೂರ್ಣವಾಗಿ ಸುತ್ತು ವರಿದಿದ್ದರು. ಪಾರ್ಟಿಯ ನಶೆಯಲ್ಲಿದ್ದ ಗ್ಯಾಂಗ್‌ಸ್ಟರ್‌ಗಳಿಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವ ಮುನ್ನವೇ ಪೊಲೀಸರು ಗನ್‌ ಪಾಯಿಂಟ್‌ನಲ್ಲಿ ಎಲ್ಲ 67 ಗ್ಯಾಂಗ್‌ಸ್ಟರ್‌ಗಳನ್ನು  ಸೆರೆ ಹಿಡಿದರು. 

ಚೋಲೈಮೇಡು ಬಿನ್ನು ಎಂಬ ಕಟ್ಟಾ ಗ್ಯಾಂಗ್‌ಸ್ಟರ್‌ನ ಬರ್ತ್‌ ಡೇ ಪಾರ್ಟಿ ಚೆನ್ನೈ ಹೊರವಲಯದ ಮಲಯಂಬಕ್ಕಂ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಪಾರ್ಟಿ ತಾಣವನ್ನು ಸುತ್ತುವರಿದು “ಆಪರೇಶನ್‌ ಬರ್ತ್‌ ಡೇ’ ಎಂಬ ಹೆಸರಿನಲ್ಲಿ  ಮಿಂಚಿನ ಕಾರ್ಯಾಚರಣೆ ನಡೆಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next