Advertisement

ಧರ್ಮಸ್ಥಳದಲ್ಲಿ “ಜಬರ್‌ದಸ್ತ್ ಶಂಕರ’

11:27 PM Oct 09, 2019 | Sriram |

“ಚಂಡಿಕೋರಿ’ ಸಿನೆಮಾದಲ್ಲಿ “ಪೊರ್ಲುಡು ಪೊರ್ಲು ಈ ತುಳುನಾಡ್‌’, “ಬರ್ಸ’ ಸಿನೆಮಾದಲ್ಲಿ “ಟಾಸೆದ ಪೆಟ್ಟ್ಗ್‌ ಊರ್‌ದ ಪಿಲಿಕುಲು ನಲಿಪುನ ಪೊರ್ಲು ತೂಯನ’,
“ಅರೆಮರ್ಲೆರ್‌’ ಸಿನೆಮಾದ “ಕುಡ್ಲದ ಚಮೇಲಿ ಎಂಚಂದ್‌ ಪನೋಲಿ’.. ಹೀಗೆ ಮೋಡಿ ಮಾಡಿದ ಸಾಲು ಸಾಲು ಹಾಡಿಗೆ ಇದೀಗ “ಜಬರ್ದಸ್ತ್ ಶಂಕರ’ ಸಿನೆಮಾದ “ಶಂಕರ ಶಿವಶಂಕರ’ ಹಾಡು ಸೇರ್ಪಡೆಗೊಂಡಿದೆ.

Advertisement

ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ “ಜಬರ್‌ದಸ್ತ್ ಶಂಕರ’ ಸಿನೆಮಾದ ಹಾಡುಗಳು ಇದೀಗ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.
ಮಾಧುರ್ಯದ ಹಾಡನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದ್ದರು. ಹೇಮಾವತಿ ಹೆಗ್ಗಡೆ, ದೇವದಾಸ್‌ ಕಾಪಿಕಾಡ್‌, ಶರ್ಮಿಳಾ ಕಾಪಿಕಾಡ್‌, ಅರ್ಜುನ್‌ ಕಾಪಿಕಾಡ್‌, ರಾಜೇಶ್‌ ಕುಡ್ಲ, ಪ್ರತೀಕ್‌ ಶೆಟ್ಟಿ, ಉದಯ ಬಲ್ಲಾಳ್‌, ಸಚಿನ್‌, ದೀಕ್ಷಿತ್‌ ಪೊಳಲಿ, ಶರತ್‌ ಪೂಜಾರಿ, ಪ್ರವೀಣ್‌ ಉಪಸ್ಥಿತರಿದ್ದರು.

ಮಣಿಕಾಂತ್‌ ಕದ್ರಿ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡನ್ನು ದೇವದಾಸ್‌ ಕಾಪಿಕಾಡ್‌ ರಚಿಸಿ ಅವರೇ ಹಾಡಿದ್ದಾರೆ. ಸಿನೆಮಾದಲ್ಲಿ ಮೂರು ಹಾಡುಗಳಿವೆ. ಸಿನೆಮಾಕ್ಕೆ ಕತೆ, ಚಿತ್ರಕತೆ, ಸಾಹಿತ್ಯದೊಂದಿಗೆ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸಿನೆಮಾವು ನವೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ.

ತಾರಾಗಣದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ ಬಿ. ಸಾಯಿಕೃಷ್ಣ, ಸತೀಶ್‌ ಬಂದಲೆ, ಗೋಪಿನಾಥ ಭಟ್‌, ಗಿರೀಶ್‌ ಎಂ. ಶೆಟ್ಟಿ ಕಟೀಲು, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಪ್ರತೀಕ್‌ ಶೆಟ್ಟಿ, ಸುನೀಲ್‌ ನೆಲ್ಲಿಗುಡ್ಡೆ, ಶರಣ್‌ ಕೈಕಂಬ, ತಿಮ್ಮಪ್ಪ ಕುಲಾಲ್‌ ಹಾಗೂ ಚಾ ಪರ ತಂಡದ ಕಲಾವಿದರು ಸಿನೆಮಾದಲ್ಲಿದ್ದಾರೆ.

ಛಾಯಾಚಿತ್ರಗ್ರಹಣ: ಸಿದ್ದು ಜಿ.ಎಸ್‌., ಉದಯ ಬಲ್ಲಾಳ್‌,
ಸಂಗೀತ: ಮಣಿಕಾಂತ್‌ ಕದ್ರಿ, ಸಾಹಸ ಮಾಸ್‌ ಮಾದ,
ನೃತ್ಯ:ಸ್ಟಾರ್‌ಗಿರಿ, ವಿನಾಯಕ ಆಚಾರ್ಯ, ಮುಖ್ಯ
ಸಹಾಯಕ ನಿರ್ದೇಶಕರು: ಅರ್ಜುನ್‌ ಕಾಪಿಕಾಡ್‌, ಸಹಾಯಕ ನಿರ್ದೇಶಕ: ಪ್ರಶಾಂತ್‌ ಕಲ್ಲಡ್ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next