ನವದೆಹಲಿ: ಕೇಂದ್ರ ಜಲ ಆಯೋಗ (ಸಿಡಬ್ಲ್ಯೂ ಸಿ)ದ ಅಧ್ಯಕ್ಷರಾಗಿ ಜೆ.ಚಂದ್ರಶೇಖರ ಅಯ್ಯರ್ ನೇಮಕಗೊಂಡಿದ್ದಾರೆ.
ಕೇಂದ್ರ ನೀರಾವರಿ ಎಂಜಿನಿಯರಿಂಗ್ ಸೇವೆಗಳ (ಸಿಡಬ್ಲ್ಯೂಇಎಸ್) 1984ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಅವರು ಸದ್ಯ ಆಯೋಗದ ವಿನ್ಯಾಸ ಮತ್ತು ಸಂಶೋಧನೆ ವಿಭಾಗದ ಸದಸ್ಯರಾಗಿದ್ದಾರೆ.
ಡಿ.1ರಂದು ಅವರು ಆಯೋಗದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಯ್ಯರ್ ಅವರು ಜಲಸಂಪನ್ಮೂಲ ಕ್ಷೇತ್ರದಲ್ಲಿ 36 ವರ್ಷಗಳ ಸೇವಾನುಭವ ಹೊಂದಿದ್ದಾರೆ.
ಅವರು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ನಾರ್ವೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಿಂದ ಹೈಡ್ರೋಪವರ್ ಡೆವಲಪ್‌ಮೆಂಟ್ ವಿಷಯದಲ್ಲಿ ಎಂ.ಎಸ್., ಐಐಟಿ ಮದ್ರಾಸ್‌ನಿಂದ ಎಂಟೆಕ್ ಪದವಿ ಪಡೆದಿದ್ದಾರೆ.