Advertisement

ಸಹಾಯಕ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಕನ್ನಡಿಗನನ್ನು ನೇಮಿಸಿದ ಮುಂಬೈ ಇಂಡಿಯನ್ಸ್

05:44 PM Dec 28, 2022 | Team Udayavani |

ಮುಂಬೈ: ಐಪಿಎಲ್ ನ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತನ್ನ ಸಹಾಯಕ ಸಿಬ್ಬಂದಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ಇದೀಗ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಕನ್ನಡಿಗ ಜೆ.ಅರುಣ್ ಕುಮಾರ್ ಅವರನ್ನು ನೇಮಿಸಿದೆ.

Advertisement

1990 ಮತ್ತು 2000 ರ ದಶಕಗಳಲ್ಲಿ ದೇಶೀಯ ಸರ್ಕ್ಯೂಟ್‌ನಲ್ಲಿ ಹೆವಿವೇಟ್ ಆಗಿದ್ದ ಜೆ ಅರುಣ್‌ ಕುಮಾರ್ ಅವರು ಬಲಗೈ ಆರಂಭಿಕ ಬ್ಯಾಟರ್ ಆಗಿದ್ದರು.

100 ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳ ಅನುಭವಿ, ಅರುಣ್‌ ಕುಮಾರ್ 1993 ರಿಂದ 2008 ರವರೆಗೆ 16 ವರ್ಷಗಳ ಕಾಲ ಭಾರತೀಯ ದೇಶೀಯ ಸರ್ಕ್ಯೂಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು.

ಇದನ್ನೂ ಓದಿ:ಲೈಂಗಿಕ ಕಿರುಕುಳ ಪ್ರಕರಣ: ಟಿವಿಎಫ್ ಸಂಸ್ಥಾಪಕ ಅರುಣಾಭ್ ಕುಮಾರ್ ಖುಲಾಸೆ

ನಿವೃತ್ತಿಯ ನಂತರ, ಅವರು ಕೋಚಿಂಗ್ ಕಡೆಗೆ ತಿರುಗಿದ ಅವರು 2013-14 ಮತ್ತು 2014-15 ಋತುಗಳಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಗಳನ್ನು ಗೆದ್ದಾಗ ಕರ್ನಾಟಕ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು.

Advertisement

2019-20 ಋತುವಿಗಾಗಿ ಪುದುಚೇರಿಯ ಮುಖ್ಯ ಕೋಚ್, 2020 ರಿಂದ ಯುಎಸ್ಎ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next