Advertisement

ಶ್ರೇಯಸ್ ಅಯ್ಯರ್ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡರು: ಶರ್ಮಾ

07:24 PM Mar 14, 2022 | Team Udayavani |

ಬೆಂಗಳೂರು: ಶ್ರೇಯಸ್ ಅಯ್ಯರ್ ಅವರು ಟೆಸ್ಟ್ ಸರಣಿಯಲ್ಲಿ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳೊಂದಿಗೆ ಇನ್ನಷ್ಟು ಉತ್ತಮಗೊಳ್ಳುತ್ತಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೋಮವಾರ ಹೇಳಿದ್ದಾರೆ.

Advertisement

ಎರಡನೇ ಟೆಸ್ಟ್‌ನಲ್ಲಿ 238 ರನ್‌ಗಳ ಗೆಲುವಿನೊಂದಿಗೆ ಭಾರತವು ಸೋಮವಾರ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಮಾತನಾಡಿದ ಶರ್ಮಾ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ದಿಗ್ಗಜರನ್ನು ತಂಡದಿಂದ ಕೈಬಿಟ್ಟ ನಂತರ ಆ ಜಾಗ ತುಂಬಲು    ಶ್ರೇಯಸ್ ಅಯ್ಯರ್ ದೊಡ್ಡ ಜವಾಬ್ದಾರಿ ಹೊಂದಿದ್ದರು, ಸರಣಿಯಲ್ಲಿ ಅವರು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರು.

ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಸರಣಿಯ ಇತರ ಸ್ಟಾರ್ ಪ್ರದರ್ಶನಕಾರರಾಗಿದ್ದು,ಅವರ ಆಟ ನನಗೆ ತುಂಬಾ ಸಂತೋಷ ತಂದಿದೆ ಎಂದು ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸಿದ ಶರ್ಮಾ ಹೇಳಿದರು.

ಇದನ್ನೂ ಓದಿ : ಕರುಣರತ್ನೆ ಶತಕವೂ ಲಂಕನ್ನರನ್ನು ಕಾಪಾಡಲಿಲ್ಲ: ಸರಣಿ ವೈಟ್ ವಾಶ್ ಮಾಡಿದ ಭಾರತ

“ಇದು ಉತ್ತಮ ಆಟವಾಗಿದೆ, ನಾನು ಅದನ್ನು ವೈಯಕ್ತಿಕವಾಗಿ ಮತ್ತು ತಂಡವಾಗಿ ಆನಂದಿಸಿದೆ. ನಾವು ತಂಡವಾಗಿ ಕೆಲವು ವಿಷಯಗಳನ್ನು ಸಾಧಿಸಲು ಬಯಸಿದ್ದೇವು ಮತ್ತು ಅದನ್ನು ಮಾಡಿದ್ದೇವೆ ”ಎಂದರು.

Advertisement

ರಹಾನೆ ಬದಲಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಶ್ರೇಯಸ್ ಅಯ್ಯರ್ ಕಡಿಮೆ ಸ್ಕೋರಿಂಗ್ ಮೊತ್ತದಲ್ಲಿ 92 ಮತ್ತು 67 ರನ್ ಗಳಿಸಿ ಗಮನ ಸೆಳೆದಿದ್ದರು. ಪೂಜಾರ ಬದಲಿಗೆ ಹನುಮ ವಿಹಾರಿ ಮೂರನೇ ಸ್ಥಾನದಲ್ಲಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next